×
Ad

ನಾಗರಿಕ ಸೇವಾ ಪರೀಕ್ಷೆಗೆ ಜಿಲ್ಲಾಡಳಿತದಿಂದ ತರಬೇತಿ

Update: 2017-08-11 19:48 IST

ಉಡುಪಿ, ಆ.11: ಆ.14ರಂದು ಸೋಮವಾರ ಬೆಳಗ್ಗೆ 11 ಕ್ಕೆ ಉಡುಪಿ ಅಜ್ಜರಕಾಡಿನಲ್ಲಿರುವ ಪುರಭವನದಲ್ಲಿ ಭಾರತೀಯ ನಾಗರಿಕ ಸೇವಾ ಪರೀಕ್ಷೆಯ ಕುರಿತು ಓರಿಯೆಂಟೇಶನ್ ಕಾರ್ಯಕ್ರಮ ನಡೆಯಲಿದ್ದು, ಇದನ್ನು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೊೀದ್ ಮಧ್ವರಾಜ್ ಉದ್ಘಾಟಿಸಲಿರುವರು.

2017ರ ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ರಾಜ್ಯದ ನಂದಿನಿ ಕೆ.ಆರ್.( ಪ್ರಥಮ ರ್ಯಾಂಕ್) ಮತ್ತು ನವೀನ್ ಭಟ್ ವೈ (37ನೇ ರ್ಯಾಂಕ್) ಇವರು ತಮ್ಮ ಯಶಸ್ಸಿನ ಪಯಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿದ ಬಗ್ಗೆ ಅನುಭವ, ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ.

2017ರ ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ರಾಜ್ಯದ ನಂದಿನಿಕೆ.ಆರ್. (ಪ್ರಥಮ ರ‍್ಯಾಂಕ್ )ಮತ್ತುನವೀನ್‌ಟ್ ವೈ (37ನೇ ರ‍್ಯಾಂಕ್ ) ಇವರು ತಮ್ಮ ಯಶಸ್ಸಿನ ಪಯಣ ಮತ್ತು ರ್ಸ್ಪಾತ್ಮಕಪರೀಕ್ಷೆಯನ್ನುಎದುರಿಸಿದ ಬಗ್ಗೆ ಅನುವ, ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಾಗೂ ಕುಂದಾಪುರ ಸಹಾಯಕ ಕಮೀಷನರ್ ಶಿಲ್ಪಾನಾಗ್ ಇವರು ಭಾರತೀಯ ನಾಗರಿಕ ಸೇವಾ ಪರೀಕ್ಷೆಯ ನಮೂನೆ ಮತ್ತು ಜಿಲ್ಲಾಡಳಿತ ನೀಡಲು ಉದ್ದೇಶಿಸಿರುವ ಕೋಚಿಂಗ್ ಕಾರ್ಯಕ್ರುದ ಕುರಿತು ವಿವರಿಸುವರು.

 ಕಾರ್ಯಕ್ರಮದ ಬಳಿಕ ಪುರಭವನದಲ್ಲೇ ಆಸಕ್ತರ ಹೆಸರು ರಿಜಿಸ್ಟ್ರೇಷನ್ ಮಾಡಲಾಗುವುದು. ರಿಜಿಸ್ಟ್ರೇಷನ್‌ನ್ನು ಆನ್‌ಲೈನ್- www.udupi.nic.in -ನಲ್ಲೂ ಮಾಡಬಹುದಾಗಿದೆ. ಕಾಲೇಜು ವಿದ್ಯಾರ್ಥಿಗಳು ಹಾಗೂ ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯಲು ಆಸಕ್ತಿ ಹೊಂದಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಉಡುಪಿ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News