×
Ad

ರಾಮ್ ದೇವ್ ಕುರಿತ ಪುಸ್ತಕ ಮಾರಾಟಕ್ಕೆ ನಿರ್ಬಂಧ

Update: 2017-08-11 20:54 IST

ಹೊಸದಿಲ್ಲಿ,ಆ.11: ಜಾಗರ್‌ನಾಟ್ ಬುಕ್ಸ್ ಪ್ರಕಾಶನ ಸಂಸ್ಥೆಯು ಪತ್ರಕರ್ತೆ ಪ್ರಿಯಾಂಕಾ ಪಾಠಕ್-ನಾರಾಯಣ್ ರಚಿಸಿರುವ ‘ಗಾಡ್ ಮ್ಯಾನ್ ಟು ಟೈಕೂನ್:ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಬಾಬಾ ರಾಮ್ ದೇವ್’ ಪುಸ್ತಕವನ್ನು ಪ್ರಕಟಿಸದಂತೆ ಮತ್ತು ಮಾರಾಟ ಮಾಡದಂತೆ ದಿಲ್ಲಿ ನ್ಯಾಯಾಲಯವು ನಿರ್ಬಂಧ ಹೇರಿದ್ದು, ಈ ಏಕಪಕ್ಷೀಯ ಆದೇಶದ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸುವುದಾಗಿ ಜಾಗರ್‌ನಾಟ್ ತಿಳಿಸಿದೆ.

ನೋಟಿಸ್ ಜಾರಿ ಮತ್ತು ಪ್ರತಿವಾದಿಗಳ ಹೇಳಿಕೆಗಳನ್ನು ಆಲಿಸುವ ಪ್ರಕ್ರಿಯೆಯು ಉಂಟು ಮಾಡುವ ವಿಳಂಬವನ್ನು ತಪ್ಪಿಸಲು ಪ್ರಕಾಶನ ಸಂಸ್ಥೆ ಅಥವಾ ಲೇಖಕಿಯ ಅಹವಾಲುಗಳಿಗೂ ಅವಕಾಶ ನೀಡದೇ ಏಕಪಕ್ಷೀಯವಾಗಿ ಈ ಆದೇಶವನ್ನು ಹೊರಡಿಸ ಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಜಾಗರ್‌ನಾಟ್, ನ್ಯಾಯಾಲಯದಲ್ಲಿ ದೂರು ಸಲ್ಲಿಸಲು ಪ್ರತಿಯೊಬ್ಬರೂ ಹಕ್ಕು ಹೊಂದಿದ್ದು, ಅದನ್ನು ನ್ಯಾಯಯುತ ರೀತಿಯಲ್ಲಿ ಇತ್ಯರ್ಥಗೊಳಿಸಬೇಕು. ಈ ಪ್ರಕರಣದಲ್ಲಿ ಮಾನನಷ್ಟ ಆರೋಪದ ಬಗ್ಗೆ ಖಂಡಿತ ವಾಗಿಯೂ ವಿಚಾರಣೆ ನಡೆಯಬೇಕು ಮತ್ತು ನಮ್ಮ ಪುಸ್ತಕವನ್ನು ಸಮರ್ಥಿಸಿಕೊಳ್ಳುವ ಅವಕಾಶವನ್ನು ನಾವು ಸ್ವಾಗತಿಸುತ್ತೇವೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News