×
Ad

​ತಾಪಂ ಸದಸ್ಯರಿಗೆ ಬೆದರಿಕೆ: ದೂರು

Update: 2017-08-11 21:46 IST

ಹಿರಿಯಡ್ಕ, ಆ.11: ಕಾಮಗಾರಿ ವಿಚಾರಕ್ಕೆ ಸಂಬಂಧಿಸಿ ಉಡುಪಿ ತಾಪಂ ಸದಸ್ಯರೊಬ್ಬರಿಗೆ ಪೆರ್ಡೂರು ಗ್ರಾಪಂ ಸದಸ್ಯ ಬೆದರಿಕೆ ಹಾಕಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೆರ್ಡೂರು- ಕುಕ್ಕೆಹಳ್ಳಿ ಕ್ಷೇತ್ರದ ತಾಪಂ ಸದಸ್ಯ ಸುಭಾಸ್ ನಾಯ್ಕ್(31) ಎಂಬವರು ಆ.10ರಂದು ಪೆರ್ಡೂರು ಗ್ರಾಪಂನಲ್ಲಿ ನಡೆದ ಸಾಮಾನ್ಯ ಸಭೆಗೆ ಹಾಜರಾಗಿದ್ದು, ಸಭೆ ಮುಗಿಸಿ ಅಪರಾಹ್ನ 3:10ರ ಸುಮಾರಿಗೆ ಹೊರಗಡೆ ಬರುತ್ತಿರುವಾಗ ಪೆರ್ಡೂರು ಗ್ರಾಪಂ ಸದಸ್ಯ ಗಿರೀಶ್ ಭಟ್ ಎಂಬವರಲ್ಲಿ ಕಾಮಗಾರಿ ಬಗ್ಗೆ ಕೇಳಿದರೆನ್ನಲಾಗಿದೆ. ಆಗ ಗಿರೀಶ್ ಭಟ್, ಸುಭಾಸ್ ನಾಯ್ಕ್ಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಯತ್ನಿಸಿದ್ದು, ಈ ಸಂದರ್ಭ ಗ್ರಾಪಂ ಸದಸ್ಯರಾದ ಪ್ರಕಾಶ ಪೂಜಾರಿ, ಜಗದೀಶ ಹೆಗ್ಡೆ, ನರಸಿಂಹ ದೇವಾಡಿಗ ಹಾಗೂ ಇತರ ಸದಸ್ಯರು ತಡೆದರು. ಬಳಿಕ ಗಿರೀಶ್ ಭಟ್ ಬೆದರಿಕೆ ಹಾಕಿ ಕಾರಿನಲ್ಲಿ ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News