×
Ad

ಬೋಫೋರ್ಸ್ ಹಗರಣದ ತನಿಖೆಯನ್ನು ಮತ್ತೆ ಆರಂಭಿಸಲಿದೆಯೇ ಸಿಬಿಐ?

Update: 2017-08-11 22:07 IST

ಹೊಸದಿಲ್ಲಿ, ಆ.11: ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಲಂಚ ಸ್ವೀಕರಿಸಿದ್ದಾರೆ ಎನ್ನಲಾದ ಬೋಫೋರ್ಸ್ ಹಗರಣದ ತನಿಖೆಯನ್ನು ಮತ್ತೆ ಆರಂಭಿಸುವ ಸೂಚನೆಯನ್ನು ಸಿಬಿಐ ನೀಡಿದೆ.

ಬೋಫೋರ್ಸ್ ಹಗರಣದ ತನಿಖೆಯನ್ನು ಮತ್ತೆ ಆರಂಭಿಸಲಾಗುವುದು. ಇದಕ್ಕೆ ಕಾನೂನು ಸಚಿವಾಲಯ ಸಮ್ಮತಿ ನೀಡಬೇಕಿದೆ ಎಂದು ಸಿಬಿಐ ಸಂಬಂಧಿಸಿದ ಸಂಸದರಿಗೆ ತಿಳಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಪ್ರಕರಣ ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌ನ 2005ರ ಆದೇಶವನ್ನು ಸಿಬಿಐ ಪ್ರಶ್ನಿಸಬೇಕು ಎಂದು ಸಂಸತ್ ಸದಸ್ಯರ ಸಮಿತಿ ಜೂನ್‌ನಲ್ಲಿ ಹೇಳಿತ್ತು.

ಇದು ವ್ಯವಸ್ಥೆ ವಿಫಲವಾಗಿರುವುದಕ್ಕೆ ಸ್ಪಷ್ಟ ಉದಾಹರಣೆ ಹಾಗೂ ಅಪರಾಧೀತನದ ಪ್ರತಿಬಿಂಬ ಎಂದು ಸಂಸದರ ಸಮಿತಿ ಹೇಳಿತ್ತು. 1986ರ ಬೋಫೋರ್ಸ್ ಹಾವಿಟ್ಜರ್ ಖರೀದಿ ಹಗರಣದ ತನಿಖೆಯನ್ನು ಮರು ಆರಂಭಿಸಲು ಸಿಬಿಐ ಕೇಂದ್ರ ಸರಕಾರದ ಅನುಮತಿ ಪಡೆಯುವಂತೆ, ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸುವಂತೆ ಸಮಿತಿ ಹೇಳಿತ್ತು.

ಬೋಫೋರ್ಸ್ ಖರೀದಿಗೆ ಸಂಬಂಧಿಸಿ ಲೇಖಪಾಲರು ನೀಡಿದ ವರದಿಯನ್ನು ಆರು ಸದಸ್ಯರ ಸಂಸದರ ಸಮಿತಿ ಪರಿಶೀಲನೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News