×
Ad

ಆಧಾರ್ ತಿದ್ದುಪಡಿ ಕೇಂದ್ರಗಳು ಕಾರ್ಯಾರಂಭ

Update: 2017-08-11 22:20 IST

ಉಡುಪಿ, ಆ.11: ಆಧಾರ್ ನೊಂದಣಿ ಸಂದರ್ಭದಲ್ಲಿ ಆಧಾರ್ ಕಾರ್ಡ್ ನಲ್ಲಿರುವ ಹೆಸರು, ಜನ್ಮ ದಿನಾಂಕ, ವಿಳಾಸದ ಬದಲಾವಣೆ ಅಥವಾ ತಿದ್ದುಪಡಿ ಮಾಡುವ ಸಲುವಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಉಡುಪಿ ಜಿಲ್ಲೆಯ ಅಂಚೆ ಕಚೇರಿಗಳಾದ ಉಡುಪಿ, ಕಾಪು, ಕಟಪಾಡಿ, ಕುಂಜಿಬೆಟ್ಟು, ಪಡುಬಿದ್ರಿ, ಶಿರ್ವ, ಉದ್ಯಾವರ ಮಣಿಪಾಲ ಪ್ರಧಾನ ಅಂಚೆ ಕಚೇರಿ, ಬಾರ್ಕೂರು, ಬ್ರಹ್ಮಾವರ, ಸಂತೆಕಟ್ಟೆ, ಕುಂದಾಪುರದ ಪ್ರಧಾನ ಅಂಚೆ ಕಚೇರಿ, ಬಸ್ರೂರು, ಬೈಂದೂರು, ಕೋಟೇಶ್ವರ, ವಂಡ್ಸೆ ಹಾಗೂ ಪ್ರಧಾನ ಅಂಚೆ ಕಚೇರಿ ಕಾರ್ಕಳ ಇಲ್ಲಿನ ಅಂಚೆ ಇಲಾಖೆಗಳಲ್ಲಿ ಆಧಾರ್ ತಿದ್ದುಪಡಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.

ಸಾರ್ವಜನಿಕರು ಕಚೇರಿಯ ಸಮಯದಲ್ಲಿ ಭೇಟಿ ನೀಡಿ ಆಧಾರ್ ಕಾರ್ಡ್‌ನ ನೊಂದಣಿಯಲ್ಲಿ ತಿದ್ದುಪಡಿ/ಬದಲಾವಣೆಯನ್ನು ಮಾಡಿಕೊಳ್ಳ ಬಹುದು. ಅಲ್ಲದೇ ತಾಲೂಕು ಕಚೇರಿ ಕುಂದಾಪುರ, ಕಾರ್ಕಳ, ಉಡುಪಿ ಹಾಗೂ ವಿಶೇಷ ತಹಶೀಲ್ದಾರ್ ಕಚೇರಿ ಬ್ರಹ್ಮಾವರ, ಬೈಂದೂರು, ನಾಡ ಕಚೇರಿಗಳಾದ ಕಾಪು, ಕೋಟ, ವಂಡ್ಸೆ, ಅಜೆಕಾರು ಇಲ್ಲಿ ತೆರೆಯಲಾಗಿರುವ ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ಹಾಗೂ ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿರುವ ಸ್ಪಂದನ ಕೇಂದ್ರ ಗಳಲ್ಲಿ ಸಾರ್ವಜನಿಕರು ಹೊಸದಾಗಿ ಆಧಾರ್ ಕಾರ್ಡ್ ನೊಂದಣಿ ಮಾಡಲು ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News