ಕೇಂದ್ರೀಯ ಸೆನ್ಸಾರ್ ಮಂಡಳಿಯ ಅಧ್ಯಕ್ಷ ಪಹಲಾಜ್ ನಿಹಲಾನಿ ವಜಾ

Update: 2017-08-11 17:17 GMT

ಹೊಸದಿಲ್ಲಿ, ಆ. 11: ಸೆನ್ಸಾರ್ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಪಹ್ಲಾಜ್ ನಿಹಲಾನಿ ಅವರನ್ನು ಶುಕ್ರವಾರ ವಜಾಗೊಳಿಸಲಾಗಿದೆ. ಅವರ ಸ್ಥಾನಕ್ಕೆ ಪ್ರಸಿದ್ಧ ಗೀತೆ ರಚನೆಕಾರ ಪ್ರಸೂನ್ ಜೋಷಿ ಅವರನ್ನು ನೇಮಕ ಮಾಡಲಾಗಿದೆ.

 ಸಿಬಿಎಫ್‌ಸಿ (ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್) ಅನ್ನು ಅವರು ತನ್ನ ಸ್ವಂತ ಆಸ್ತಿ ಎಂಬಂತೆ ಪರಿಗಣಿಸುತ್ತಿದ್ದರು ಎಂದು ಆರೋಪಿಸಿರುವ ಪಹ್ಲಾಜ್ ನಿಹಲಾನಿ ಅವರ ಸಹೋದ್ಯೋಗಿಯೊಬ್ಬರು, ಅನೈತಿಕ ಪೊಲೀಸ್‌ಗಿರಿ, ಚಿತ್ರದ ದೃಶ್ಯಗಳಿಗೆ ವಿವೇಚನಾ ರಹಿತವಾಗಿ ಕತ್ತರಿ ಹಾಕಲು ಹೇಳುತ್ತಾರೆ ಎಂದು ಚಿತ್ರ ನಿರ್ಮಾಣಕಾರರು ಹಾಗೂ ಚಿತ್ರ ವಿಮರ್ಶಕರು ಆರೋಪಿಸುತ್ತಾರೆ ಬಂದಿದ್ದಾರೆ ಎಂದರು.

ಮಧುರ್ ಭಂಡಾರ್ಕರ್ ಅವರ ‘ಇಂದು ಸರ್ಕಾರ್’ ಚಿತ್ರದ ಹಲುವ ದೃಶ್ಯಗಳಿಗೆ ಕತ್ತರಿ ಹಾಕಲು ಆಗ್ರಹಿಸಿರುವುದು, ‘ಲಿಪ್ಸ್ಟಿಕ್ ಅಂಡರ್ ಮೈ ಬುರ್ಕಾ’ ಚಿತ್ರಕ್ಕೆ ಪ್ರಮಾಣ ಪತ್ರ ನೀಡಲು ನಿರಾಕರಿಸಿರುವುದು ಅವರ ಇತ್ತೀಚೆಗಿನ ಹಗರಣಗಳು.

2015 ಜನವರಿಯಲ್ಲಿ ಸೆನ್ಸಾರ್ ಮಂಡಳಿ ಅಧ್ಯಕ್ಷರಾಗಿ ಪಹಲಾಜ್ ನಿಹಲಾನಿ ಅವರನ್ನು ನೇಮಕಗೊಳಿಸಲಾಗಿತ್ತು. ಆದರೆ, ಅವರ ಅಧಿಕಾರ ಅವಧಿಯ ಉದ್ದಕ್ಕೂ ವಿವಾದದಲ್ಲೇ ಸಿಲುಕಿದ್ದರು.

ಇತ್ತೀಚೆಗೆ ಶಾರುಕ್ ಖಾನ್‌ನ ಚಿತ್ರವೊಂದರಲ್ಲಿದ್ದ ಪದವೊಂದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ನೋಬೆಲ್ ಪುರಸ್ಕೃತ ಅಮರ್ತ್ಯಸೇನ್ ಕುರಿತು ನಿರ್ಮಿಸಲಾದ ಸಾಕ್ಷಚಿತ್ರದಲ್ಲಿದ್ದ ‘ಗೋವು’ ಹಾಗೂ ‘ಹಿಂದೂ ಇಂಡಿಯಾ’ ಎಂಬ ಪದಗಳಿಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

 ಕಳೆದ ವರ್ಷ ಪಹ್ಲಾಜ್ ನಿಹಲಾನಿ ನೇತೃತ್ವದ ಸೆನ್ಸಾರ್ ಮಂಡಳಿ ಪಂಜಾಬ್‌ನ ಮಾದಕ ದ್ರವ್ಯ ಸಮಸ್ಯೆ ಕುರಿತು ಚಿತ್ರೀಕರಿಸಲಾದ ‘ಉಡ್ತಾ ಪಂಜಾಬ್’ ಚಿತ್ರದ 89 ದೃಶ್ಯಗಳಿಗೆ ಕತ್ತರಿ ಹಾಕುವಂತೆ ಆದೇಶಿಸಿತ್ತು. ಹಾಗೂ ಪಂಜಾಬ್, ಚುನಾವಣೆ ಹಾಗೂ ರಾಜಕೀಯ ಪಕ್ಷಗಳ ಉಲ್ಲೇಖವನ್ನು ತೆಗೆಯುವಂತೆ ನಿರ್ಮಾಪಕರಿಗಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News