ಮೂರನೆ ಟೆಸ್ಟ್: ಭಾರತ 329/6(90 ಓವರ್)

Update: 2017-08-12 12:22 GMT

 ಪಲ್ಲೆಕೆಲೆ, ಆ.12: ಶ್ರೀಲಂಕಾ ವಿರುದ್ಧದ ಮೂರನೆ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತ ಮೊದಲ ದಿನದಾಟದಂತ್ಯಕ್ಕೆ ಸಾಧಾರಣ ಮೊತ್ತ ದಾಖಲಿಸಿದೆ.

ಪಲ್ಲೆಕೆಲೆ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಇಂದು ಮೊದಲ ದಿನದಾಟದಂತ್ಯಕ್ಕೆ ಪ್ರಥಮ ಇನಿಂಗ್ಸ್‌ನಲ್ಲಿ 90 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 329 ರನ್ ಗಳಿಸಿದೆ.

 13 ರನ್ ಗಳಿಸಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಮತ್ತು 1 ರನ್ ಗಳಿಸಿರುವ ಹಾರ್ದಿಕ್ ಪಾಂಡ್ಯ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.

ಭಾರತದ ಪರ ಶಿಖರ್ ಧವನ್(119) ಶತಕ ದಾಖಲಿಸಿದ್ದಾರೆ. ಲೋಕೇಶ್ ರಾಹುಲ್(85) ಶತಕ ವಂಚಿತಗೊಂಡರು.

ಲಂಕಾದ ಮಿಲಿಂದ ಪುಷ್ಪಕುಮಾರ (40ಕ್ಕೆ 3). ಲಕ್ಷಣ್ ಸಂಡಕನ್(84ಕ್ಕೆ 2) ಮತ್ತು ವಿಶ್ವ ಫೆರ್ನಾಂಡೊ(68ಕ್ಕೆ 1) ದಾಳಿಗೆ ಭಾರತದ ಮಧ್ಯಮ ಸರದಿಯ ಬ್ಯಾಟಿಂಗ್ ಸೊರಗಿದೆ.

ಚೇತೇಶ್ವರ ಪೂಜಾರ (8), ನಾಯಕ ವಿರಾಟ್ ಕೊಹ್ಲಿ(42), ಅಜಿಂಕ್ಯ ರಹಾನೆ(17) ಮತ್ತು ರವಿಚಂದ್ರನ್ ಅಶ್ವಿನ್(31) ಔಟಾಗಿದ್ದಾರೆ.

ಟಾಸ್ ಜಯಿಸಿದ ಭಾರತದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News