×
Ad

ಮಂಗಳೂರು ವಿವಿ ಎನ್‍ಎಸ್‍ಎಸ್ ಘಟಕದ ವತಿಯಿಂದ ವನಮಹೋತ್ಸವ

Update: 2017-08-12 18:39 IST

ಕೊಣಾಜೆ,ಆ.12: ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ, ಮಂಗಳಗಂಗೋತ್ರಿ ಘಟಕದ ವತಿಯಿಂದ ವಿವಿಯ ಕ್ರಿಡಾಂಗಣದ ಬಳಿ ವನಮಹೋತ್ಸವ ಕಾರ್ಯಕ್ರಮವು ಶುಕ್ರವಾರ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ ಅವರು, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಸಾಮಾಜಿಕ ಜವ್ಬಾದಾರಿ. ಉಸಿರಾಡಲು ಆಮ್ಲಜನಕ, ಆಹಾರ, ಆಶ್ರಯ ಎಲ್ಲವನ್ನೂ ನೀಡಿ ನಮಗೆ ಬದುಕನ್ನು ಕಟ್ಟಿಕೊಟ್ಟಿರುವ ಪ್ರಕೃತಿಗೆ   ನಾವೆಲ್ಲರೂ  ಋಣಿಯಾಗಿದ್ದೇವೆ. ಕೊನೆಯ ಪಕ್ಷ ಗಿಡಗಳನ್ನು ನೆಟ್ಟು ಪೋಷಿಸಿ ಪರಿಸರದ  ಋಣ ತೀರಿಸಲು ನಾವು ಪ್ರಯತ್ನಿಸಬೇಕು.  ಎಲ್ಲ ಜೀವಿಗಳ ಉಗಮದ ನಂತರ ಮಾನವನ ಉಗಮವಾಗಿದ್ದು, ಮಾನವನಿಲ್ಲದೆ ಜೀವಸಂಕುಲ ಅಸ್ಥಿತ್ವದಲ್ಲಿರುತ್ತದೆ.   ಆದರೆ ಜೀವವೈವಿಧ್ಯ ಇಲ್ಲದೇ ಮಾನವ ಉಳಿಯಲಾರ. ಗಿಡಮರಗಳನ್ನು ನೆಡುವ ಪರಿಸರ ಸ್ನೇಹಿ ಕಾರ್ಯಕ್ರಮಗಳಿಗೆ  ಎಲ್ಲಾ ರೀತಿಯ ನೆರವು ಸಹಕಾರವನ್ನು ನೀಡಲು ಅರಣ್ಯ ಇಲಾಖೆಯು ಸದಾ  ಸಿದ್ಧವಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಕೆ. ಎಂ. ಲೋಕೇಶ್ ಅವರು, ಗಿಡಗಳನ್ನು ನೆಟ್ಟು ಸಂಭ್ರಮಿಸುವ ವನಮಹೋತ್ಸವ  ಒಂದು ಅರ್ಥಪೂರ್ಣ ಕಾರ್ಯಕ್ರಮ. ಆದರೆ ನೆಟ್ಟ ಗಿಡಗಳನ್ನು ಪೆÇೀಷಿಸಿ ಉಳಿಸದಿದ್ದರೆ   ಅದು ಒಣಮಹೋತ್ಸವ ಆಗುತ್ತದೆ. ಅದಕ್ಕೆ ಆಸ್ಪದ ನೀಡದೆ ಮಳೆಗಾಲದಲ್ಲಿ ನೆಟ್ಟ ಗಿಡಗಳನ್ನು ಬೇಸಿಗೆಯಲ್ಲಿ ನೀರೆರೆದು ಪೆÇೀಷಿಸಿ ಉಳಿಸಿ, ಬೆಳೆಸುವ ಬಗ್ಗೆಯೂ ಕಾಳಜಿ ವಹಿಸಬೇಕು. ಆವಾಗ ಮಾತ್ರ ವನಮಹೋತ್ಸವ ಸಾರ್ಥಕವಾಗುತ್ತದೆ.  ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿ ಕ್ಯಾಂಪಸ್‍ನಲ್ಲಿ  ಅರಣ್ಯ ಇಲಾಖೆಯ ಸಹಭಾಗಿತ್ವದೊಂದಿಗೆ  ಹಣ್ಣುಹಂಪಲುಗಳನ್ನು ನೀಡುವ ಗಿಡಗಳನ್ನು ನೆಟ್ಟು ಇನ್ನಷ್ಟೂ ಹಸಿರಿನಿಂದ ಸಮೃದ್ಧಿಗೊಳಿಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದರು.

ಜೀವವಿಜ್ಞಾನ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಪ್ರಶಾಂತ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್.ಎಸ್. ಸಂಯೋಜಕರಾದ ಡಾ. ತ್ರಿವೇಣಿ ಅರಸ್  ಅತಿಥಿಗಳನ್ನು ಸ್ವಾಗತಿಸಿದರು. ಡಾ. ರಾಜು ಚಲನಾವರ್, ಡಾ. ಜೆರಾಲ್ಡ್ ಸಂತೋಷ ಡಿ’ಸೋಜ, ಡಾ.ಪ್ರಸನ್ನ,  ರಮೇಶ್ ಹೆಚ್. ಎನ್.  ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News