×
Ad

ಡಿಕೆಎಸ್‌ಸಿ ಡೆವಲೆಪ್‌ಮೆಂಟ್ ಕಮಿಟಿಗೆ ಆಯ್ಕೆ

Update: 2017-08-12 19:24 IST

ಮಂಗಳೂರು, ಆ.12: ಡಿಕೆಎಸ್‌ಸಿ ಡೆವಲೆಪ್‌ಮೆಂಟ್ ಕಮಿಟಿಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಪಾವೂರು ಕಾಂಪ್ಲೆಕ್ಸ್‌ನ ಸಂಸ್ಥೆಯ ಕಚೇರಿಯಲ್ಲಿ ಮುಹಮ್ಮದ್ ಇಸಾಕ್ ಬೊಳ್ಳಾಯಿಯ ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಕಿನ್ಯ, ಕೋಶಾಧಿಕಾರಿ ಅಬ್ದುಲ್ ಹಮೀದ್ ಸುಳ್ಯ ಮತ್ತು ರಿಯಾದ್ ಹಾಗೂ ದಮ್ಮಾಮ್ ವಲಯದ ಕಾರ್ಯಕರ್ತರು ಉಪಸ್ಥಿತರಿದ್ದರು.

ಸಂಸ್ಥೆಯ 2017-18ನೆ ಸಾಲಿನ ಅಧ್ಯಕ್ಷರಾಗಿ ಮುಹಮ್ಮದ್ ಇಸಾಕ್ ಬೊಳ್ಳಾಯಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಮಜೀದ್ ಕನ್ನಂಗಾರ್, ಕೋಶಾಧಿಕಾರಿಯಾಗಿ ಅಹ್ಮದ್ ಶರೀಫ್ ಬಜ್ಪೆ, ಉಪಾಧ್ಯಕ್ಷರಾಗಿ ಇಸ್ಮಾಯೀಲ್ ಶರೀಫ್ ವಿಟ್ಲ, ಮೊಹಮ್ಮದ್ ಮೇದರಬೆಟ್ಟು, ಜೊತೆ ಕಾರ್ಯದರ್ಶಿಯಾಗಿ ಯು.ಡಿ. ಇಬ್ರಾಹೀಂ ಉಳ್ಳಾಲ, ಸಂಶುದ್ದೀನ್ ಬಳ್ಕುಂಜೆ, ಲೆಕ್ಕಪರಿಶೋಧಕರಾಗಿ ಅಲಿ ಅಬ್ಬಾಸ್ ಸೂರಲ್ಪಾಡಿ, ಸಂಚಾಲಕರಾಗಿ ಪಲ್ಲಿಕುಟ್ಟಿ ಹಾಜಿ, ಅಬ್ದುಲ್ಲಾ ಕುವೆಂಜ, ಇಸ್ಮಾಯೀಲ್ ಪುತ್ತೂರು, ಫಾರೂಕ್ ಸುರತ್ಕಲ್, ವೈ. ಅಹ್ಮದ್ ಹಾಜಿ ಉಚ್ಚಿಲ, ಮುಹಮ್ಮದ್ ಬಿ.ಸಿ.ರೋಡ್ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News