ರಕ್ಷಣಾ ಕ್ಷಿಪಣಿಗಳನ್ನು ನಿಯೋಜಿಸಿದ ಜಪಾನ್

Update: 2017-08-12 14:16 GMT

ಟೋಕಿಯೊ, ಆ. 12: ಜಪಾನ್‌ನ ಆಕಾಶದ ಮೂಲಕ ಗ್ವಾಮ್‌ನತ್ತ ಪ್ರಕ್ಷೇಪಕ ಕ್ಷಿಪಣಿಗಳನ್ನು ಸಿಡಿಸುವುದಾಗಿ ಉತ್ತರ ಕೊರಿಯ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ, ಜಪಾನ್ ಶನಿವಾರ ‘ಪ್ಯಾಟ್ರಿಯಟ್’ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸಿದೆ ಎಂದು ವರದಿಗಳು ಹೇಳಿವೆ.

ಪಶ್ಚಿಮ ಜಪಾನ್‌ನ ಶಿಮಾನೆ, ಹಿರೋಶಿಮ ಮತ್ತು ಕೊಚ್ಚಿ ಎಂಬ ಸ್ಥಳಗಳಲ್ಲಿ ಜಪಾನ್ ರಕ್ಷಣಾ ಸಚಿವಾಲಯವು ಪ್ಯಾಟ್ರಿಯಟ್ ಅಡ್ವಾನ್ಸ್‌ಡ್ ಕ್ಯಪೇಬಿಲಿಟಿ-3 (ಪಿಎಸಿ-3) ಕ್ಷಿಪಣಿಗಳನ್ನು ನಿಯೋಜಿಸಿದೆ.

ಈ ನಗರಗಳು ತನ್ನ ಕ್ಷಿಪಣಿಗಳ ಹಾರಾಟದ ದಾರಿಯಲ್ಲಿ ಬರಬಹುದು ಎಂಬುದಾಗಿ ಪ್ಯಾಂಗ್‌ಯಾಂಗ್ ಎಚ್ಚರಿಸಿದೆ ಎಂದು ಸರಕಾರಿ ಟಿವಿ ಎನ್‌ಎಚ್‌ಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News