ಗ್ವಾಮ್ ರಕ್ಷಣೆಗೆ ಅಮೆರಿಕ ಪಡೆಗಳು ಸಿದ್ಧ: ಟ್ರಂಪ್

Update: 2017-08-12 14:20 GMT

ಬೀಜಿಂಗ್, ಆ. 12: ಪೆಸಿಫಿಕ್ ಸಾಗರದಲ್ಲಿರುವ ಅಮೆರಿಕದ ಭೂಭಾಗ ಗ್ವಾಮ್‌ನತ್ತ ಪ್ರಕ್ಷೇಪಕ ಕ್ಷಿಪಣಿಗಳನ್ನು ಹಾರಿಸುವುದಾಗಿ ಉತ್ತರ ಕೊರಿಯ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ, ಭೂಭಾಗವನ್ನು ರಕ್ಷಿಸಲು ಅಮೆರಿಕ ಸೇನೆ ‘ತಯಾರಾಗಿದೆ’ ಎಂದು ಶ್ವೇತಭವನ ಶನಿವಾರ ಘೋಷಿಸಿದೆ.

ಅಮೆರಿಕದ ಉಳಿದ ಭಾಗಗಳ ಜೊತೆ ಗ್ವಾಮ್‌ನಲ್ಲಿ ವಾಸಿಸುತ್ತಿರುವ ಜನರ ಸುರಕ್ಷತೆಯನ್ನು ಖಾತರಿಪಡಿಸಲು ಅಮೆರಿಕದ ಸೇನೆ ಸಿದ್ಧವಾಗಿದೆ ಎಂಬುದಾಗಿ ಗ್ವಾಮ್ ಗವರ್ನರ್ ಎಡ್ಡೀ ಕಾಲ್ವೊ ಜೊತೆ ಫೋನ್‌ನಲ್ಲಿ ಮಾತನಾಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭರವಸೆ ನೀಡಿದರು ಎಂದು ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News