ಮಲಯಾಳಿಗಳನ್ನು ಕೆಣಕಿ ಬಾಲ ಸುಟ್ಟುಕೊಂಡ ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ಟಿವಿ

Update: 2017-08-12 15:52 GMT

ತಿರುವನಂತಪುರಂ, ಆ.12: ಮಲಯಾಳಿಗಳನ್ನು ಅವಮಾನಿಸುವ ರೀತಿಯ ಚರ್ಚೆಗಳನ್ನು ಹಾಗೂ ನಕಲಿ ಸುದ್ದಿಗಳನ್ನು ಪ್ರಸಾರ ಮಾಡಿದ ರಿಪಬ್ಲಿಕ್ ಟಿವಿ ಚಾನೆಲ್ ವಿರುದ್ಧ ಸಮರ ಸಾರಿದ ಮಲಯಾಳಿಗಳು ಯಶಸ್ವಿಯಾಗಿದ್ದಾರೆ.

ಆರಂಭದಲ್ಲಿ ಫೇಸ್ ಬುಕ್ ಪೇಜ್ ರಿವೀವ್ ನಲ್ಲಿ ರಿಪಬ್ಲಿಕ್ ಚಾನೆಲ್ ಹೆಸರಿನ ಗ್ರೂಪ್ ನ ಮೇಲೆ ದಾಳಿ ನಡೆಸಿದ ಮಲಯಾಳಿಗಳು ಫೇಸ್ಬುಕ್ ಪೇಜ್ ರಿವೀವ್ ನಲ್ಲಿ 1 ಸ್ಟಾರ್ ನೀಡಲು ಆರಂಭಿಸಿದರು. ಇದರಿಂದಾಗಿ ರಿಪಬ್ಲಿಕ್ ಚಾನೆಲ್ ನ ಸ್ಟಾರ್ ರೇಟಿಂಗ್ 4.7ರಿಂದ 2.1ಕ್ಕೆ ಕುಸಿಯಿತು. ಕೂಡಲೇ ಎಚ್ಚೆತ್ತುಕೊಂಡ ರಿಪಬ್ಲಿಕ್ ಚಾನೆಲ್ ತನ್ನ ರಿವೀವ್ ಆಯ್ಕೆಯನ್ನು ತೆಗೆದುಹಾಕಿತು.

ಈ ಬಗ್ಗೆ ಮತ್ತೊಮ್ಮೆ ಮಲಯಾಳಿಗಳು ಟೀಕೆ ಮಾಡಲು ಆರಂಭಿಸಿದ್ದರಿಂದ ರಿವೀವ್ ಆಯ್ಕೆಯನ್ನು ಫೇಕ್ ರಿವೀವ್ ಗಳ ಮೂಲಕ ರಿಸ್ಟೋರ್ ಮಾಡಿತು. ಇದರಿಂದಾಗಿ 5 ಸ್ಟಾರ್ ರೇಟಿಂಗ್ ಗಣನೀಯವಾಗಿ ಏರಿಕೆಯಾಗಿ 1 ಸ್ಟಾರ್ ರೇಟಿಂಗ್ ಕುಸಿಯಿತು. ಆದರೆ ಕೂಡಲೇ ವಿಶ್ವಾದ್ಯಂತ ಇರುವ ಮಲಯಾಳಿಗಳು ಅಷ್ಟಕ್ಕೇ ಸುಮ್ಮನಾಗಲಿಲ್ಲ. ನಕಲಿ ಖಾತೆಗಳ ಮೂಲಕ ಕಳೆದುಕೊಂಡಿದ್ದ ರೇಟಿಂಗನ್ನು ಮರಳಿ ಪಡೆದ ರಿಪಬ್ಲಿಕ್ ಚಾನೆಲ್ ನ ಪ್ರಯತ್ನ ಮತ್ತೊಮ್ಮೆ ಸೋತಿತು. 5 ಸ್ಟಾರ್ ರೇಟಿಂಗ್ ಏರಿಕೆಯಾಗುತ್ತಲೇ ರಿಪಬ್ಲಿಕ್ ಟಿವಿ ಪೇಜ್ ಅಡ್ಮಿನ್ ಫೇಕ್ ರಿವೀವ್ ಗಳನ್ನು ತೆಗೆಯುವಂತೆ ಫೇಸ್ ಬುಕ್ ಜೊತೆಗೆ ಮನವಿ ಮಾಡಿದರು.

ಆದರೆ ಇದುವೇ ಚಾನೆಲ್ ಗೆ ಮುಳುವಾಯಿತು. 5  ಸ್ಟಾರ್ ರೇಟಿಂಗ್ ಹೆಚ್ಚಿಸುವ ಸಲುವಾಗಿ ನಕಲಿ ಖಾತೆಗಳನ್ನು ಬಳಸಿರುವುದು ಫೇಸ್ಬುಕ್ ಗೂ ಅರಿವಾಗಿದೆ. ನಕಲಿ ರಿವೀವ್ ಗಳನ್ನು ಪೇಸ್ಬುಕ್ ತೆಗೆದುಹಾಕುತ್ತಲೇ ಫೇಸ್ಬುಕ್ ಪೇಜ್ ನ ರೇಟಿಂಗ್ 2ಕ್ಕೆ ಇಳಿದಿದೆ.

5  ಸ್ಟಾರ್ ರೇಟಿಂಗ್  ನೀಡಿದ್ದ 70 ಸಾವಿರ ರಿವೀವ್ ಗಳು 44 ಸಾವಿರಕ್ಕೆ ಇಳಿದಿದೆ. ಇನ್ನೊಂದೆಡೆ 1 ಸ್ಟಾರ್ ರೇಟಿಂಗ್ 1.31 ಲಕ್ಷ ತಲುಪಿದೆ. ರಿಪಬ್ಲಿಕ್ ಚಾನೆಲ್ ನ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆಗಳು ಹೆಚ್ಚಾಗುತ್ತಲೇ ಗೂಗಲ್ ಪ್ಲೇ ಸ್ಟೋರ್ ನಿಂದ ರಿಪಬ್ಲಿಕ್ ಟಿವಿ ಆ್ಯಪನ್ನು ತೆಗೆದುಹಾಕಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News