ಸುಮತ್ರಾ ದ್ವೀಪದಲ್ಲಿ ನಡುಗಿದ ಭೂಮಿ

Update: 2017-08-13 08:39 GMT

ಇಂಡೋನೇಶ್ಯ, ಆ.13: ಸುಮತ್ರಾ ದ್ವೀಪದಲ್ಲಿ 6.4 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಸುನಾಮಿಯ ಅಪಾಯವಿಲ್ಲ ಎನ್ನಲಾಗಿದೆ. ಭೂಕಂಪನದಿಂದ ಆತಂಕಕ್ಕೀಡಾದ ಸುಮತ್ರಾ ನಿವಾಸಿಗಳು ಮನೆಗಳನ್ನು ತೊರೆದಿದ್ದಾರೆ ಎನ್ನಲಾಗಿದೆ.

“ಭೂಕಂಪವು ಪ್ರಬಲವಾಗಿತ್ತು. ಆದರೆ ಸುನಾಮಿಯ ಯಾವುದೇ ಆತಂಕವಿಲ್ಲ” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರಾಣಹಾನಿಯ ಸಂಭವಿಸಿದೆಯೇ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿದೆ. “ಕೆಲವು ಸೆಕೆಂಡ್ ಗಳ ಕಾಲ ಭೂಮಿ ನಡುಗಿತ್ತು. ಭೂಕಂಪದ ತೀವ್ರತೆ ಪ್ರಬಲವಾಗಿತ್ತು” ಎಂದು ಇಲ್ಲಿನ ನಿವಾಸಿಯೊಬ್ಬರು ತಿಳಿಸಿದ್ದಾರೆ.

“ನನ್ನ 7 ತಿಂಗಳ ಮೊಮ್ಮಗಳನ್ನು ಎತ್ತಿಕೊಂಡು ನಾನು ಓಡಿದೆ. ನೆರೆಮನೆಯವರೂ ಸಹ ಮನೆಯಿಂದ ಹೊರಗೋಡಿ ಬಂದರು” ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News