ಬಿರುವೆರ್ ಕುಡ್ಲ ಮಹಿಳಾ ಘಟಕದಿಂದ ಸಹಾಯಧನ ವಿತರಣೆ

Update: 2017-08-13 11:58 GMT

ಮಂಗಳೂರು, ಆ.13: ಪಡುಬಿದ್ರಿ ಬಳಿಯ ಹೆಜಮಾಡಿ ಎಂಬಲ್ಲಿನ ಅವರಾಲು ಮಟ್ಟಿ ಎಂಬಲ್ಲಿ ವಾಸಿಸುತ್ತಿರುವ ಲೀಲಾ ಪೂಜಾರಿ ಎಂಬವರು ಮಾರಕ ಕಾಯಿಲೆಯಿಂದ ಬಳಲುತ್ತಿದ್ದು, ಇವರ ಚಿಕಿತ್ಸೆಗಾಗಿ ಬಿರುವೆರ್ ಕುಡ್ಲ ಸಂಘಟನೆಯ ಮಹಿಳಾ ಘಟಕದ ವತಿಯಿಂದ ಸಹಾಯ ಧನ ವಿತರಿಸಲಾಯಿತು.

ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಳ್ಳಾಲ್‌ಬಾಗ್ ಸಂಘಟನೆ ಅಸ್ತಿತ್ವಕ್ಕೆ ಬಂದು ಕೇವಲ ಮೂರು ವರ್ಷಗಳಲ್ಲಿ ತನ್ನ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು ಈಗ ಈ ಸಂಘಟನೆಯ ಮಹಿಳಾ ಘಟಕವೂ ಇದೇ ಸಹಾಯಹಸ್ತ ಚಾಚುವ ಹಾದಿಯಲ್ಲಿ ಮುನ್ನಡೆಯುತ್ತಿದೆ.

 ಪಡುಬಿದ್ರಿ ಬಳಿಯ ಹೆಜಮಾಡಿ ಎಂಬಲ್ಲಿನ ಅವರಾಲು ಮಟ್ಟಿ ಎಂಬಲ್ಲಿ ವಾಸಿಸುತ್ತಿರುವ ಲೀಲಾ ಪೂಜಾರಿ ಎಂಬವರು ಮಾರಕ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಲೀಲಾ ಅವರ ಪತಿ ಅಶೋಕ್ ಪೂಜಾರಿ ಕೂಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದು, ಮಕ್ಕಳಾದ ಪವನ್ ಹಾಗೂ ಪೃಥ್ವಿ ಸ್ಥಳೀಯ ಕನ್ನಡ ಮಾಧ್ಯಮ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆಯುತ್ತಿದ್ದಾರೆ. ಲೀಲಾ ಅವರು ಕ್ಯಾನ್ಸರ್ ಎಂಬ ಮಾರಕ ಕಾಯಿಲೆಗೆ ತುತ್ತಾಗಿರುವುದರಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬ ನೆರವಿಗಾಗಿ ಎದುರು ನೋಡುತ್ತಿದೆ.

ಇವರ ಕಷ್ಟದ ಕುರಿತು ಅರಿತ ಬಿರುವೆರ್ ಕುಡ್ಲ ಸಂಘಟನೆಯ ಮಹಿಳಾ ಘಟಕವು ಮಾರ್ಗದರ್ಶಕರಾದ ವಿದ್ಯಾ ರಾಕೇಶ್ ನೇತೃತ್ವದಲ್ಲಿ ಲೀಲಾ ಅವರ ನಿವಾಸಕ್ಕೆ ತೆರಳಿ 32,500 ರೂ. ಧನ ಸಹಾಯ ವಿತರಿಸಿದೆ.

ಬಿರುವೆರ್ ಕುಡ್ಲ ಸಂಘಟನೆಯ ಮಹಿಳಾ ಘಟಕದ ಸದಸ್ಯರಾದ ಪ್ರಮೋದಾ ಸತೀಶ್, ಭವ್ಯ, ದೀಪಿಕಾ ಸುವರ್ಣ, ರೇಶ್ಮಾ ಉಳ್ಳಾಲ್, ರಾಜೀವಿ, ಪೂಜಾ, ನಳಿನಿ ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News