ಬಿಆರ್ ಡಿ ಆಸ್ಪತ್ರೆಯ ನೋಡಲ್ ಅಧಿಕಾರಿ ಕರ್ತವ್ಯದಿಂದ ಡಾ.ಕಫೀಲ್ ಖಾನ್ ವಜಾ

Update: 2017-08-13 16:31 GMT

ಉತ್ತರ ಪ್ರದೇಶ, ಆ.13: ಗೋರಖ್ ಪುರ ಬಿಆರ್ ಡಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸ್ಥಗಿತಗೊಂಡ ಕಾರಣ ಸಂಭವಿಸಿದ ದುರಂತ ನಡುವೆ ಸಾಧ್ಯವಾದಷ್ಟು ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸಿದ ಡಾ.ಕಫೀಲ್ ಖಾನ್ ರನ್ನು ನೋಡಲ್ ಅಧಿಕಾರಿ ಕರ್ತವ್ಯದಿಂದ ತೆಗೆದುಹಾಕಲಾಗಿದೆ.

ಆಸ್ಪತ್ರೆಯಲ್ಲಿ ಆಕ್ಸಿಜನ್ ಸ್ಥಗಿತಗೊಂಡಿದೆ ಎನ್ನುವ ಮಾಹಿತಿ ಲಭಿಸುತ್ತಲೇ ಕಾರ್ಯೋನ್ಮುಖರಾಗಿದ್ದ ಡಾ.ಕಫೀಲ್ ಖಾನ್, ಬೇರೆ ಆಸ್ಪತ್ರೆಗಳನ್ನು ಸಂಪರ್ಕಿಸಿ 3 ಆಕ್ಸಿಜನ್ ಸಿಲಿಂಡರ್ ಗಳನ್ನು ತಂದಿದ್ದರು. ಈ ಮೂರು ಸಿಲಿಂಡರ್ ಗಳು ಅರ್ಧ ಗಂಟೆಯಲ್ಲೇ ಮುಗಿದು ಹೋಗುತ್ತದೆ ಎಂದು ಮನಗಂಡ ಡಾ. ಕಫೀಲ್ ಇನ್ನೂ ಇತರ ಆಸ್ಪತ್ರೆಗಳನ್ನು ಸಂಪರ್ಕಿಸಿ 12 ಸಿಲಿಂಡರ್ ಗಳನ್ನು ತಂದಿದ್ದರು. ಇದೇ ಸಂದರ್ಭ ಹಣ ನೀಡಿದರೆ ಸ್ಥಳೀಯ ಪೂರೈಕೆದಾರನೊಬ್ಬ ಹಣ ಪಾವತಿಸಿದರೆ ಸಿಲಿಂಡರ್ ನೀಡುತ್ತಾನೆ ಎಂದು ತಿಳಿದ ಡಾ. ಕಫೀಲ್, ತನ್ನ ಡೆಬಿಟ್ ಕಾರ್ಡನ್ನು ಆಸ್ಪತ್ರೆಯ ಸಿಬ್ಬಂದಿಗೆ ನೀಡಿ ಹೆಚ್ಚುವರಿ ಸಿಲಿಂಡರ್ ತರಿಸಿದ್ದರು.

ಈ ಮೂಲಕ ತನ್ನಿಂದ ಸಾಧ್ಯವಾದಷ್ಟು ಮಕ್ಕಳನ್ನು ಕಾಪಾಡಿದರು. ಆದರೆ ಇದೀಗ ಅವರನ್ನು ನೋಡಲ್ ಅಧಿಕಾರಿ ಹುದ್ದೆಯಿಂದ ತೆಗೆದುಹಾಕಲಾಗಿದೆ ಎನ್ನುವ ಮಾಹಿತಿ ಲಭಿಸಿದ್ದು, ಇದಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News