×
Ad

ತನ್ನ ಕ್ಷೇತ್ರದ ಅಗತ್ಯಗಳನ್ನು ಪೂರೈಸಲಾಗದ ಆದಿತ್ಯನಾಥ್ ರಾಜ್ಯವನ್ನು ಹೇಗೆ ನಿಭಾಯಿಸಬಲ್ಲರು?

Update: 2017-08-13 19:10 IST

ಲಕ್ನೋ, ಆ.13: ಗೋರಖ್ ಪುರ ದುರಂತಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಇದು ಕೊಲೆಗಡುಕ ಸರಕಾರ. ಈ ಮಕ್ಕಳು ಸಾಯಲಿಲ್ಲ ಬದಲಾಗಿ, ಅವರನ್ನು ಕೊಲ್ಲಲಾಗಿದೆ. ಇದಕ್ಕೂ ಹೆಚ್ಚಿನ ನಾಚಿಕೆಗೇಡಿನ ವಿಷಯವೆಂದರೆ ಇದು ಮುಖ್ಯಮಂತ್ರಿಯ ಕ್ಷೇತ್ರದಲ್ಲೇ ನಡೆದಿದೆ. ತಮ್ಮ ಕ್ಷೇತ್ರದ ಅಗತ್ಯಗಳನ್ನು ಪೂರೈಸಲಾಗದ ಆದಿತ್ಯನಾಥ್ ರಾಜ್ಯದ ಮುಖ್ಯಮಂತ್ರಿ ಜವಾಬ್ದಾರಿಯನ್ನು ಹೇಗೆ ನಿಭಾಯಿಸಬಲ್ಲರು” ಎಂದು ಪ್ರಶ್ನಿಸಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಹದ್ದೂರ್, ಗೋರಖ್ ಪುರ ಘಟನೆಯು ರಾಜ್ಯ ಸರಕಾರದ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ. ಮುಖ್ಯಮಂತ್ರಿ ಸ್ಥಾನಕ್ಕೆ ಆದಿತ್ಯನಾಥ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಆಕ್ಸಿಜನ್ ಕೊರತೆಯಿಂದ ಈ ದುರಂತ ಸಂಭವಿಸಿದ್ದಲ್ಲ ಎಂದು ಈಗಾಗಲೇ ತೀರ್ಪು ನೀಡಿರುವಾಗ ಏನನ್ನು ತನಿಖೆ ನಡೆಸಲು ಸಾಧ್ಯ ಎಂದವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News