1984ರ ಸಿಖ್ ವಿರೋಧಿ ದಂಗೆ: ಸಿಟ್ ಮುಖ್ಯಸ್ಥರ ಹಾಜರಾತಿಗೆ ಕೋರ್ಟ್ ನಿರ್ದೇಶ

Update: 2017-08-13 13:47 GMT

ಹೊಸದಿಲ್ಲಿ,ಆ.13: ಪ್ರಕರಣವೊಂದರ ಸಂಪೂರ್ಣ ಮರುತನಿಖೆ ನಡೆಸುವಂತೆ ಆದೇಶಿಸಲಾಗಿದ್ದರೂ ಕೇವಲ ಮುಂದಿನ ತನಿಖೆಯನ್ನು ನಡೆಸಿದ್ದೇಕೆ ಎನ್ನುವುದನ್ನು ತನ್ನೆದುರು ಹಾಜರಾಗಿ ವಿವರಿಸುವಂತೆ ದಿಲ್ಲಿಯ ಹೆಚ್ಚುವರಿ ಮುಖ್ಯ ಮಹಾನಗರ ನ್ಯಾಯಾಲಯವು ವಿಶೇಷ ತನಿಖಾ ತಂಡ(ಸಿಟ್)ದ ಮುಖ್ಯಸ್ಥರಿಗೆ ನಿರ್ದೇಶ ನೀಡಿದೆ. 1984ರ ಸಿಖ್ ವಿರೋಧಿ ದಂಗೆ ಪ್ರಕರಣಗಳ ಮರುತನಿಖೆಗಾಗಿ ಸಿಟ್‌ನ್ನು ರಚಿಸಲಾ ಗಿತ್ತು.

  ಸಿಟ್‌ಗೆ ನೀಡಲಾಗಿರುವ ಆದೇಶದಂತೆ ತನಿಖೆ/ಮರುತನಿಖೆಯ ವ್ಯಾಖ್ಯಾನ ಕುರಿತು ಸಿಟ್ ಮುಖ್ಯಸ್ಥ ಅನುರಾಗ್ ಅವರು ಸಲ್ಲಿಸಿರುವ ಉತ್ತರವು ತೃಪ್ತಿಕರವಾಗಿಲ್ಲ ಎಂದು ಹೇಳಿರುವ ನ್ಯಾ.ಅಜಯ ಸಿಂಗ್ ಶೇಖಾವತ್ ಅವರು, ಪ್ರಕರಣದ ಮರುತನಿಖೆ ನಡೆಸುವಂತೆ ಆದೇಶವಿದ್ದರೂ ಮುಂದಿನ ತನಿಖೆಯನ್ನು ಮಾತ್ರ ನಡೆಸಿದ್ದೇಕೆ ಎನ್ನುವುದನ್ನು ಅವರು ಸೆ.13ರಂದು ಖುದ್ದಾಗಿ ನ್ಯಾಯಾಲಯದಲ್ಲಿ ಹಾಜರಾಗಿ ವಿವರಿಸಬೇಕು ಎಂದು ಆದೇಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News