ಬೋಳಂತೂರು ಗ್ರಾಮದ ಎನ್.ಸಿ ರೋಡ್ ಶಾಖೆ ಎಸ್‍ಎಸ್‍ಎಫ್ ವತಿಯಿಂದ ರಕ್ತದಾನ ಶಿಬಿರ

Update: 2017-08-13 13:58 GMT

ವಿಟ್ಲ,ಆ.13: ಬೋಳಂತೂರು ಗ್ರಾಮದ ಎನ್.ಸಿ ರೋಡ್ ಶಾಖೆ ಎಸ್‍ಎಸ್‍ಎಫ್ ಹಾಗೂ ಮಂಗಳೂರು ಕುಂಟಿಕಾನ ಎಜೆ ಮೆಡಿಕಲ್ ಕಾಲೇಜಿನ ವತಿಯಿಂದ ರಕ್ತದಾನ ಶಿಬಿರ ಬೋಳಂತೂರಿನ ಎನ್.ಸಿ ರೋಡಿನಲ್ಲಿ ಭಾನುವಾರ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ  ಎಂ.ಎಸ್ ಮಹಮ್ಮದ್ ಅವರು ರಕ್ತದಾನ ಶ್ರೇಷ್ಠದಾನವಾಗಿದೆ. ಒಬ್ಬರಿಗೆ ರಕ್ತದಾನ ಮಾಡಿದಾಗ ಒಂದು ಜೀವವನ್ನು ಉಳಿಸಿದ ಪ್ರತಿಫಲದ ಜೊತೆಗೆ ಆತನ ಕುಟುಂಬವನ್ನು ಸಂರಕ್ಷಣೆ ಮಾಡಿದಂತಾಗುತ್ತದೆ. ಎಲ್ಲಾ ಸಮುದಾಯದವರು ಒಟ್ಟುಗೂಡಿ ರಕ್ತದಾನ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸುಮಾರು 70 ಮಂದಿ ರಕ್ತದಾನ ಮಾಡಿದರು. ಅನಿವಾಸಿ ಭಾರತೀಯರ ಗ್ಲೋಬಲ್ ಸಂಯೋಜಕ ಅಬ್ದುಲ್ ಅಝೀಝ್ ಕೆ.ಪಿ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಕಾಶ್ ಚಂದ್ರ ಶೆಟ್ಟಿ ತುಂಬೆ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಬಂಟ್ವಾಳ ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಇಬ್ರಾಹಿಂ ಖಲೀಲ್ ಮುಸ್ಲಿಯಾರ್, ಮಹಮ್ಮದಾಲಿ ಸಖಾಫಿ ಸುರಿಬೈಲು, ಪ್ರಶಾಂತ್ ಕುಲಾಲ್, ನೇಮಿರಾಜ್ ರೈ, ಅಕ್ಬರ್ ಅಲಿ ಮದನಿ, ಸಿದ್ದಿಕ್ ಸಅದಿ, ರಾಧಾಕೃಷ್ಣ ಶೆಟ್ಟಿ, ಆಬೀದ್ ನಈಮಿ, ಅಬ್ದುಲ್ ಲತೀಫ್ ಸಖಾಫಿ, ಶರೀಫ್ ನಂದಾವರ, ಕರೀಂ ಕದ್ಕಾರ್, ಮಹೇಶ್ ನಾಯಕ್ ಕಂಡಿಗ, ಅಬ್ದುಲ್ ರಶೀದ್ ಹಾಜಿ ವಗ್ಗ, ಚಂದ್ರಶೇಖರ ರೈ, ಅಬ್ದುಲ್ ರಹಿಮಾನ್ ಸಖಾಫಿ, ಅಬ್ಬಾಸ್ ಮುಸ್ಲಿಯಾರ್, ಸಿ.ಎಚ್ ಅಬೂಬಕ್ಕರ್, ಮುತ್ತಲಿಬ್ ಹಾಜಿ, ಅಬ್ದುಲ್ ಖಾದರ್, ಅಬ್ದುಲ್ ರಝಾಕ್, ರಫೀಕ್ ಮಾಡದ ಬಳಿ, ಇಬ್ರಾಹಿಂ ಖಂಡಿಗ, ಸಿ.ಎಚ್ ರಝಾಕ್ ಸೆರ್ಕಳ, ಅಲಿ ಮದನಿ, ಯಾಕುಬ್ ದಂಡೆಮಾರ್, ಇಬ್ರಾಹಿಂ ಬಶೀರ್, ವಿಶ್ವಜೀತ್ ಶೆಟ್ಟಿ, ನಾರಾಯಣ ಟೈಲರ್, ಇಬ್ರಾಹಿಂ ಎನ್.ಸಿ ರೋಡ್, ಕೆ.ಪಿ ಖಾದರ್ ಮೊದಲಾದವರು ಉಪಸ್ಥಿತರಿದ್ದರು.ಗಝಾಲ್ ಕುಡ್ತಮುಗೇರು ಸ್ವಾಗತಿಸಿ, ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News