×
Ad

ಬಿಆರ್ ಡಿ ಆಸ್ಪತ್ರೆಗೆ 4 ನೋಟಿಸ್ ಕಳುಹಿಸಿದ್ದ ಆಮ್ಲಜನಕ ಪೂರೈಕೆ ಕಂಪೆನಿ

Update: 2017-08-13 20:08 IST

ಲಕ್ನೋ, ಆ. 13: ಬಾಬಾ ರಾಘವ ದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ಕಂಪೆನಿ ಕಾನೂನು ನೋಟಿಸ್ ರವಾನಿಸಿರುವ ವಿಚಾರ ಈಗ ಬಹಿರಂಗಗೊಂಡಿದೆ.

  ದ್ರವೀಕೃತ ಆಮ್ಲಜನಕ ಸಿಲಿಂಡರ್ ಪೂರೈಸುವ ಕಂಪೆನಿ ಪುಷ್ಪಾ ಸೇಲ್ಸ್ ಪ್ರೈವೇಟ್ ಲಿಮಿಟೆಡ್ 60 ಲಕ್ಷ ಮೀರಿದ ಮೊತ್ತವನ್ನು ಪಾವತಿಸುವಂತೆ ವೈದ್ಯಕೀಯ ಆಸ್ಪತ್ರೆಗೆ ನಾಲ್ಕು ಕಾನೂನು ನೋಟಿಸ್ ಗಳನ್ನು ಕಳುಹಿಸಿತ್ತು.

 ಈ ವರ್ಷ ಫೆಬ್ರವರಿಯಲ್ಲಿ ಮೊದಲ ಕಾನೂನು ನೋಟಿಸ್ ಕಳುಹಿಸಲಾಗಿತ್ತು. ಆಗಸ್ಟ್ 9ರಂದು ಕೊನೆಯ ನೋಟಿಸ್ ಕಳುಹಿಸಲಾಗಿತ್ತು. ಆದರೆ, ಆಸ್ಪತ್ರೆ ಪುಷ್ಪಾ ಸೇಲ್ಸ್‌ನ ಮನವಿಯನ್ನು ನಿರ್ಲಕ್ಷಿಸಿತ್ತು. ಘಟನೆ ನಡೆದ ಬಳಿಕ 52 ಲಕ್ಷ ರೂಪಾಯಿ ಪಾವತಿಸಿತ್ತು.

ಆದರೆ, ಈಗ ಮತ್ತೊಂದು ವಿಚಾರ ಬಹಿರಂಗಗೊಂಡಿದೆ. ಬಿಆರ್‌ಡಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ರಾಜೀವ್ ಮಿಶ್ರಾ ಆಮ್ಲಜನಕ ಪೂರೈಸುವ ಕಂಪೆನಿ ಹಾಗೂ ಗುತ್ತಿಗೆದಾರರಿಗೆ ಅನುಕೂಲವಾಗಲು ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News