ಮಮತಾರಿಗೆ ಡಾಕ್ಟರೇಟ್
Update: 2017-08-13 21:39 IST
ಉಡುಪಿ, ಆ.13: ಉಡುಪಿಯ ಗ್ಲೋವಿನ್‌ಸ್ಟಾರ್ ಇಂಟಿಗ್ರೇಟೆಡ್ ಸ್ಕೂಲ್‌ನ ಅಧ್ಯಾಪಕಿಯಾಗಿರುವ ಮಮತಾ, ಶ್ರೀಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ.ಮಾಧವಿ ಎಸ್. ಭಂಡಾರಿ ಅವರ ಮಾರ್ಗದರ್ಶನ ದಲ್ಲಿ ಸಲ್ಲಿಸಿದ ‘ಪೂನಮ್ ತಿವಾರಿ ಕೇ ಕಥಾ ಸಾಹಿತ್ಯ ಮೇಂ ಪಾರಿವಾರಿಕ್ ಜದ್ದೋಜಹದ್’ ಎಂಬ ಪ್ರೌಢ ಪ್ರಬಂಧಕ್ಕೆ ಚೆನ್ನೈನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ. ಇವರು ಧಾರವಾಡ ಕೇಂದ್ರದಿಂದ ಈ ಅಧ್ಯಯನ ನಡೆಸಿದ್ದರು.