ಐನ್‌ಸ್ಟೀನ್ ಪತ್ರ 21 ಸಾವಿರ ಡಾಲರ್‌ಗೆ ಹರಾಜು

Update: 2017-08-13 16:32 GMT

ಬಾಸ್ಟನ್,ಆ.13: ತನ್ನ ಪತ್ನಿಯ ವಿವಾಹವಿಚ್ಚೇದನದ ಕುರಿತ ಏರ್ಪಾಡುಗಳು ಹಾಗೂ ತನ್ನ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿ ವಿಶ್ವವಿಖ್ಯಾತ ಭೌತಶಾಸ್ತ್ರಜ್ಞ ಅಲ್ಬರ್ಟ್ ಐನ್‌ಸ್ಟೀನ್ 1919ರಲ್ಲಿ ಬರೆದ ಪತ್ರವೊಂದು ಸುಮಾರು 21,492 (ಸುಮಾರು 13.74 ಲಕ್ಷ ರೂ.)ಡಾಲರ್ ಬೆಲೆಗೆ ಅಮೆರಿಕದಲ್ಲಿ ಮಾರಾಟವಾಗಿದೆ.

   ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಐನ್‌ಸ್ಟೀನ್ 1919ರ ಡಿಸೆಂಬರ್ 5ರಂದು ಬರೆದಿರುವ ಈ ಪತ್ರದ ಒಂದು ಬದಿಯಲ್ಲಿ ಅಲ್ಬರ್ಟ್ ಎಂದು, ಇನ್ನೊಂದರಲ್ಲಿ ಪಾಪಾ ಎಂಬುದಾಗಿ ಬರೆದಿದ್ದಾರೆ.

9X11  ಇಂಚು ಅಗಲದ ಈ ಪತ್ರವು ಈಗಲೂ ಸುಸ್ಥಿತಿಯಲ್ಲಿದೆ. ಈ ಪತ್ರದ ಆರಂಭದಲ್ಲಿ ಐನ್‌ಸ್ಟೇನ್ ತನ್ನ ಪತ್ನಿ ಮಿಲೆವಾ ಮಾರಿಕ್ ಜೊತೆಗಿನ ವಿವಾಹ ವಿಚ್ಛೇದನಕ್ಕೆ ಹಾಗೂ ಪುತ್ರ ಹ್ಯಾನ್ಸ್ ಅಲ್ಬರ್ಟ್‌ನ ಶಿಕ್ಷಣದ ಬಗ್ಗೆ ಪ್ರಸ್ತಾಪಿಸಿದ್ದಾರೆಂದು ಹರಾಜುದಾರ ಸಂಸ್ಥೆ ಅಮೆರಿಕದ ಆರ್.ಆರ್.ಹೌಸ್ ಪ್ರಕಟಿಸಿದ ಹೇಳಿಕೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News