ಮಲಾರ್‍ನಲ್ಲಿ ಪಿಎಫ್‍ಐಯಿಂದ ರಕ್ತದಾನ, ಸನ್ಮಾನ ಕಾರ್ಯಕ್ರಮ

Update: 2017-08-13 16:35 GMT

ಕೊಣಾಜೆ,ಆ.13: ಕೆಲವು ವರ್ಷಗಳ ಹಿಂದೆ ರಕ್ತದಾನದ ಬಗ್ಗೆ ಯುವಕರಲ್ಲಿ ಆತಂಕ, ತಪ್ಪು ಕಲ್ಪನೆಯಿತ್ತಾದರೂ ಪ್ರಸ್ತುತ ದಿನಗಳಲ್ಲಿ ದೂರವಾಗಿದೆ, ಇದಕ್ಕೆ ಪಿಎಫ್‍ಐ ಹಮ್ಮಿಕೊಂಡಿರುವ ಜಾಗೃತಿಯೇ ಕಾರಣ ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಜಿಲ್ಲಾಧ್ಯಕ್ಷ ರಫೀಪ್ ದಾರಿಮಿ ಅಭಿಪ್ರಾಯಪಟ್ಟರು.

ಉಳ್ಳಾಲ ವಲಯ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಯೆನೆಪೊಯ ವೈದ್ಯಕೀಯ ಕಾಲೇಜಿನ ಸಹಕಾರದಲ್ಲಿ ರವಿವಾರ ಮಲಾರ್ ಸೆಂಟ್ರಲ್ ಮುಸ್ಲಿಂ ಶಾಲೆಯಲ್ಲಿ ನಡೆದ ಸಾರ್ವಜನಿಕ ರಕ್ತದಾನ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಯೆನೆಪೊಯ ವೈದ್ಯಕೀಯ ಕಾಲೇಜಿನ ಡಾ.ಶಫಾ ಮಾತನಾಡಿ, ರಕ್ತದಾನ ಎಂಬುದು ಇನ್ನೊಬ್ಬರ ಜೀವಕ್ಕೆ ನಾವು ನೀಡುವ ಮಹತ್ತರ ಕೊಡುಗೆಯಾಗಿದೆ. ರಕ್ತದಾನ ಮಾಡುವುದರಿಂದ ನಮ್ಮಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚಳವಾಗುವ ಜೊತೆ ಆರೋಗ್ಯವಂತರಾಗಿಲು ಸಾಧ್ಯ. ಎಲ್ಲಕ್ಕಿಂತಲೂ ಮುಖ್ಯವಾಗಿ ಒಂದು ಜೀವ ಉಳಿಸಿದ ಪುಣ್ಯವೂ ಸಿಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಿ.ಎಂ.ಶಾಲೆಯಲ್ಲಿ ಮಖ್ಯ ಶಿಕ್ಷಕರಾಗಿ ಇತ್ತೀಚೆಗೆ ನಿವೃತ್ತರಾದ ಎಚ್.ಎಂ.ಮಹಮ್ಮದ್ ಮಾಸ್ಟರ್ ಅವರನ್ನು ಸನ್ಮಾನಿಸಲಾಯಿತು.

ವಲಯ ಪಿಎಫ್‍ಐ ವೈದ್ಯಕೀಯ ಉಸ್ತುವಾರಿ ಶಹೀದ್ ಕಿನ್ಯ ಅಧ್ಯಕ್ಷತೆ ವಹಿಸಿದ್ದರು. ಪಿಎಫ್‍ಐ ರಾಜ್ಯ ಸಮುದಾಯ ಅಭಿವೃದ್ಧಿ ಘಟಕದ ಸಂಯೋಜಕ ಅಶ್ರಫ್ ಮಾಚಾರ್, ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ್, ಶಾಲೆಯ ಮುಖ್ಯ ಶಿಕ್ಷಕಿ ಮನೋರಮಾ, ಎಸ್‍ಡಿಪಿಐ ಕ್ಷೇತ್ರಾಧ್ಯಕ್ಷ ಅಬ್ಬಾಸ್ ಕಿನ್ಯ, ಪಿಎಫ್‍ಐ ಕ್ಷೇತ್ರಾಧ್ಯಕ್ಷ ಸಿದ್ದೀಕ್ ಯು.ಬಿ, ಕಾರ್ಯದರ್ಶಿ ಹಾರೀಸ್ ಮಲಾರ್, ಸಮಾಜ ಸೇವಕ ಇಲ್ಯಾಸ್ ಮಲಾರ್ ಪಿ.ಕೆ, ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್, ಎಂ.ಇ.ಎಸ್. ಅಧ್ಯಕ್ಷ ಎಸ್.ಎಂ.ಇಸ್ಮಾಯಿಲ್ ಕೋಡಿ, ಪಿಎಫ್‍ಐ ಮಲಾರ್ ಘಟಕಾಧ್ಯಕ್ಷ ನಾಸೀರ್ ಮಲಾರ್ ಮೊದಲಾದವರು ಉಪಸ್ಥಿತರಿದ್ದರು.

ಝಾಯೀದ್ ಮಲಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News