ಅಡ್ಡೂರು:70ನೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕ್ರೀಡಾಕೂಟ

Update: 2017-08-13 16:39 GMT

ಅಡ್ಡೂರು,ಆ.13: ಫೈವ್ ಸ್ಟಾರ್ ಯಂಗ್ ಬಾಯ್ಸ್(ರಿ)ಅಡ್ಡೂರು ಹಾಗೂ ಶಾಲಾ ಹಿತರಕ್ಷಣಾ ಸಮಿತಿ ಅಡ್ಡೂರು ಇದರ ಜಂಟಿ ಆಶ್ರಯದಲ್ಲಿ 70 ನೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಗಸ್ಟ್ 15 ರಂದು ಬೆಳಗ್ಗೆ ಅಡ್ಡೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕ್ರೀಡಾಕೂಟವನ್ನು ಅಯೋಜಿಸಲಾಗಿದೆ.

ಅಡ್ಡೂರು ಗ್ರಾಮದ ಆಯ್ದ 8 ತಂಡಗಳಿಂದ ‘ಫ್ರೀಡಂ ಕಬಡ್ಡಿ ಸೀಸನ್-3’ ಪಂದ್ಯಾಕೂಟವು ನಡೆಯಲಿದೆ. ಅಡ್ಡೂರು ಗ್ರಾಮದ ನಾಗರಿಕರಿಗೆ ಮತ್ತು ಅಡ್ಡೂರು ಸರಕಾರಿ ಶಾಲಾ ಹಳೆ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಏರ್ಪಾಡಿಸಲಾಗಿದೆ.

ಪ್ರಶಸ್ತಿ ವಿತರಣಾ ಹಾಗೂ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ.ಇಬ್ರಾಹಿಂ ತಾಲ್ಲೂಕು ಪಂಚಾಯತ್ ಸದಸ್ಯರು ಸಚಿನ್ ಅಡಪ,ಹಾಗೂ ಗ್ರಾಮ ಪಂಚಾಯತ್ ಸದಸ್ಯರು,ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಾಮಾಜಿಕ,ರಾಜಕೀಯ ನಾಯಕರುಗಳು ಭಾಗವಹಿಸಲಿದ್ದಾರೆ ಎಂದು ಅಡ್ಡೂರು ಶಾಲಾ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಸ್ತಾರ್ ಅಡ್ಡೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News