ಝೀನತ್ ಬಕ್ಷ್ ಆಡಳಿತ ಸಮಿತಿ ಅಧ್ಯಕ್ಷರಾಗಿ ಯೆನೆಪೊಯ ಅಬ್ದುಲ್ಲ ಕುಂಞಿ ಆಯ್ಕೆ
Update: 2017-08-14 20:29 IST
ಮಂಗಳೂರು, ಆ.14: ನಗರದ ಬಂದರ್ ಝೀನತ್ ಬಕ್ಷ್ ಜುಮಾ ಮಸೀದಿಯ ಆಡಳಿತ ಸಮಿತಿಗೆ ಜು.30ಕ್ಕೆ ಚುನಾವಣೆ ನಡೆದಿದ್ದು, ರವಿವಾರ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಿತು.
ಝೀನತ್ ಬಕ್ಷ್ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಯೆನೆಪೊಯ ಅಬ್ದುಲ್ಲ ಕುಂಞಿ, ಉಪಾಧ್ಯಕ್ಷರಾಗಿ ಮಾಜಿ ಮೇಯರ್ ಕೆ. ಅಶ್ರಫ್, ಕಾರ್ಯದರ್ಶಿಯಾಗಿ ಹನೀಫ್ ಹಾಜಿ, ಕೋಶಾಧಿಕಾರಿಯಾಗಿ ಸೈಯದ್ ಭಾಷಾ ತಂಙಳ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಗೆ ಅಬ್ದುಲ್ ಸಮದ್, ಅದ್ದು ಹಾಜಿ, ಮಕ್ಬೂಲ್ ಅಹ್ಮದ್, ಮುಹಮ್ಮದ್ ಅಶ್ರಫ್, ಹಾಜಿ ಐ. ಮೊಯ್ದಿನಬ್ಬ, ಎಸ್.ಎಂ. ರಶೀದ್ ಹಾಜಿ, ಯೂಸುಫ್ ಕರ್ದಾರ್ ಆಯ್ಕೆಯಾಗಿದ್ದಾರೆ.
ಉಪಚುನಾವಣಾಧಿಕಾರಿಯಾದ ನಿವೃತ್ತ ಎಸ್ಸೈ ವಿ. ಮುಹಮ್ಮದ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.