×
Ad

ಉತ್ತಮ ಪರಿಸರದಿಂದ ಆರೋಗ್ಯವಂತ ಸಮಾಜ: ರಮಾನಾಥ ರೈ

Update: 2017-08-14 21:34 IST

ಬಂಟ್ವಾಳ, ಆ. 14: ನಮ್ಮ ಹಿರಿಯರ ಜೀವನಕ್ರಮ, ತಿಳುವಳಿಕೆಯಿಂದ ಪ್ರಕೃತಿಯಲ್ಲಿ ರಕ್ಷಣೆ ಪಡೆಯುತ್ತಿದ್ದರು. ನಮ್ಮ ಸಂಸ್ಕೃತಿ, ಜ್ಞಾನವನ್ನು ಮುಂದಿನ ತಲೆಮಾರಿಗೆ ತಿಳಿಸುವುದು ಉತ್ತಮ ಕಾರ್ಯ. ಅರಣ್ಯ, ಪರಿಸರ ರಕ್ಷಣೆಯಿಂದ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದರು.

ಬಂಟ್ವಾಳದ ಕೊಯಿಲ ಸ. ಪ್ರೌ. ಶಾಲೆಯಲ್ಲಿ ಜರಗಿದ ಆಟಿದ ಗಮ್ಮತ್ತ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ರಗತಿಪರ ಕೃಷಿಕ ಗೋಪಿನಾಥ ರೈ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ದೇವಪ್ಪ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಆರೊಗ್ಯ ಕೇಂದ್ರದ ಮಲೇರಿಯ ಪರಿವೀಕ್ಷಕ ಜಯರಾಮ ಅವರು ಆಟಿ ತಿಂಗಳ ಆಹಾರ ಕ್ರಮ, ಆರೋಗ್ಯ ಕುರಿತು ಮಾಹಿತಿ ನೀಡಿದರು.

ತಾಪಂ ಸದಸ್ಯೆ ಮಂಜುಳಾ ಸದಾನಂದ, ರಾಜ್ಯ ಗೇರು ನಿಗಮ ನಿರ್ದೇಶಕ ಜಗದೀಶ ಕೊಯಿಲ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ವಿಸ್ತರಾಣಾಧಿಕಾರಿ ಸದಾಶಿವ ಅಳಿಕೆ, ಧ.ಗ್ರಾ.ಯೋಜನೆ ರಾಯಿ ಮೇಲ್ವಿಚಾರಕ ರಾಘವೇಂದ್ರ ಭಟ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಕಾರಿ ರಾಜೇಶ್, ವಾಮದಪದವು ವಲಯ ಶಿಕ್ಷಣ ಸಂಯೋಜಕಿ ಸುಜಾತಾ, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಸಂಜೀವ ಪೂಜಾರಿ, ಕಾರ್ಯದರ್ಶಿ ನಾರಾಯಣ ಹೆಗಡೆ, ಪ್ರಮುಖರಾದ ಜನಾರ್ದನ ಚಂಡ್ತಿಮಾರ್,ಗ್ರಾ.ಪಂ. ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಹಳೆವಿದ್ಯಾರ್ಥಿ ಸಂಘದ ಪದಾಕಾರಿಗಳು, ಶಿಕ್ಷಕ ವೃಂದ ಹಾಗೂ ಪೋಷಕರು ಉಪಸ್ಥಿತರಿದ್ದರು.

ಶಿಕ್ಷಕ ರಮೇಶ್ ಮಯ್ಯ ಸ್ವಾಗತಿಸಿದರು, ಮುಖ್ಯಶಿಕ್ಷಕ ಶ್ರೀಧರ ಜಿ. ವಂದಿಸಿದರು.ಶಿಕ್ಷಕಿ ಜ್ಯೋತಿ ಕೆ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News