ಯಕ್ಷಗಾನ ವೇಷಧಾರಿ ಕೃಷ್ಣಮೂಲ್ಯರಿಗೆ ಆಸ್ರಣ್ಣ ಪ್ರಶಸ್ತಿ
Update: 2017-08-14 21:50 IST
ಮಂಗಳೂರು, ಆ.14: ಕಳೆದ 37 ವರ್ಷಗಳಿಂದ ಶ್ರೀ ಕಟೀಲು ಮೇಳದಲ್ಲಿ ನಿರಂತರವಾಗಿ ಯಕ್ಷಗಾನ ವೇಷಧಾರಿಯಾಗಿ ಸೇವೆಗೈಯ್ಯುತ್ತಿರುವ ಕೈರಂಗಳ ಕೃಷ್ಣಮೂಲ್ಯ ಅವರನ್ನು ನಗರದ ‘ಕಟೀಲು ಆಸ್ರಣ್ಣ ಶಿಷ್ಯವೃಂದ’ವು ‘ಆಸ್ರಣ್ಣ ಪ್ರಶಸ್ತಿ-2017’ಕ್ಕೆ ಆಯ್ಕೆ ಮಾಡಿದೆ.
ಹೊಸತ್ಲು ಮಹಾಲಿಂಗ ಭಟ್ಟರ ಶಿಷ್ಯ ಕೈರಂಗಳ ಕೃಷ್ಣ ಮೂಲ್ಯರು ತನ್ನ 26ನೆ ವರ್ಷ ವಯಸ್ಸಿನಲ್ಲಿ ಶ್ರೀ ಕಟೀಲು ಮೇಳಕ್ಕೆ ಸೇರಿ ಕಲ್ಲಾಡಿ ವಿಠಲ ಶೆಟ್ಟಿ ಹಾಗೂ ಕಲ್ಲಾಡಿ ದೇವಿಪ್ರಸಾದ ಶೆಟ್ಟಿಯವರ ಯಜಮಾನಿಕೆಯ ಮೇಳವೊಂದರಲ್ಲಿಯೇ ನಿರಂತರವಾಗಿ ಕಲಾವ್ಯವಸಾಯ ಮಾಡುತ್ತಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಆ.19ರಂದು ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸ್ಮಾರಕ ಸಭಾ ಭವನದಲ್ಲಿ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.