ಕೊಂಚಾಡಿಯಲ್ಲಿ ಡಿವೈಎಫ್‌ಐ ಸಭೆ
ಮಂಗಳೂರು, ಆ.14: ಡಿವೈಎಫ್‌ಐ ಯೆಯ್ಯಡಿ-ಕೊಂಚಾಡಿ ಘಟಕ ಸಭೆಯು ಸಂಘಟನಯ ಕಚೇರಿಯಲ್ಲಿ ಜರಗಿತು.
ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಯುವಜನರ ನೈಜ ಸಮಸ್ಯೆಗಳನ್ನು ಮರೆಮಾಚಲು ಯುವಜನತೆಯನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿವೆ. ದ.ಕ ಜಿಲ್ಲೆಯಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ಬಡವರು ಮತ್ತು ಶ್ರೀಮಂತರ ನಡುವಿನ ಸಂಘರ್ಷದ ಸ್ವರೂಪವನ್ನು ಪಡೆಯುತ್ತಿದ್ದು, ಇತ್ತೀಚಿಗೆ ನಡೆದ ಕಾವ್ಯಾ ಅಸಹಜ ಸಾವಿನ ಪ್ರಕರಣದಿಂದ ಇದು ಸಾಬೀತಾಗಿದೆ ಎಂದು ಹೇಳಿದರು.
ಯೆಯ್ಯಡಿ-ಕೊಂಚಾಡಿ ಡಿವೈಎಫ್‌ಐ ಸ್ಥಾಪಕ ಅಧ್ಯಕ್ಷ ಕೃಷ್ಣಪ್ಪಕೊಂಚಾಡಿ ಮಾನಾಡಿದರು. ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾಗಿ ಗಣೇಶ್ ಕೊಪ್ಪಲಕಾಡು, ಉಪಾಧ್ಯಕ್ಷರಾಗಿ ಸುನಂದ ಕೊಂಚಾಡಿ, ಯತೀಶ್, ರಂಜನ್, ಕಾರ್ಯದರ್ಶಿಯಾಗಿ ಪ್ರವೀಣ್ ಕೊಂಚಾಡಿ, ಜೊತೆ ಕಾರ್ಯದರ್ಶಿಯಾಗಿ ಪಾಂಡುರಂಗ ಕೊಂಚಾಡಿ, ಪವಿತ್ರಾ, ಕ್ರಿಸ್ಟೋಫರ್, ಕಾರ್ತಿಕ್, ಕೋಶಾಧಿಕಾರಿಯಾಗಿ ಪದ್ಮನಾಭ ಕೊಂಚಾಡಿ ಅವರನ್ನು ಆಯ್ಕೆ ಮಾಡಲಾಯಿತು.
ಶಶಿಕುಮಾರ್ ಗುಂಡಳಿಕೆ ಸ್ವಾಗತಿಸಿದರು. ಕ್ರಿಸ್ಟೋಫರ್ ವಂದಿಸಿದರು.