ಬಸ್ ಚಾಲಕನಿಂದ ಹಠಾತ್ ಬ್ರೇಕ್: ಅಜ್ಜಿ-ಮೊಮ್ಮಗಳಿಗೆ ಗಾಯ
Update: 2017-08-14 22:01 IST
ಮಂಗಳೂರು, ಆ.14:ನಗರದಿಂದ ಪಡುಬಿದ್ರೆಗೆ ಚಲಿಸುತ್ತಿದ್ದ ಖಾಸಗಿ ಬಸ್ಸಿನ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಬಸ್ಸಿನಲ್ಲಿ ಚಲಿಸುತ್ತಿದ್ದ ಅಜ್ಜಿ ಮತ್ತು ಮೊಮ್ಮಗಳಿಗೆ ಗಾಯವಾದ ಘಟನೆ ನಡೆದಿದೆ.
ನಗರದ ಹಿಲ್ಡಾ ಜೆಸಿಂತಾ ಡಿಸೋಜ ತನ್ನ ಮಗಳು ಮತ್ತು ಮೊಮ್ಮಗಳೊಂದಿಗೆ ಪಡುಬಿದ್ರೆಗೆ ಪ್ರಯಾಣಿಸುತ್ತಿದ್ದರು. ಬಸ್ ಹಳೆಯಂಗಡಿ ತಲುಪಿಸದಾ ಚಾಲಕ ಬ್ರೇಕ್ ಹಾಕಿದ ಪರಿಣಾಮ ಅಜ್ಜಿ ಹಿಲ್ಡಾ ಜೆಸಿಂತಾ ಡಿಸೋಜ ಮತ್ತು ಎರಡು ವರ್ಷದ ಮೊಮ್ಮಗಳು ಎಡೇಲ್‌ಗೆ ಗಾಯವಾಗಿದ್ದು, ಮಂಗಳೂರು ಉತ್ತರ ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.