ಪಾಕ್ ಜೊತೆಗಿನ ಸ್ನೇಹ ‘ಉಕ್ಕಿಗಿಂತಲೂ ಗಟ್ಟಿ’: ಚೀನಾ ನಾಯಕ

Update: 2017-08-14 16:54 GMT

ಇಸ್ಲಾಮಾಬಾದ್, ಆ. 14: ಚೀನಾ ಮತ್ತು ಪಾಕಿಸ್ತಾನಗಳು ಹಿಂದಿನಿಂದಲೂ ಜೊತೆ ಜೊತೆಯಾಗಿ ಸಾಗಿವೆ ಹಾಗೂ ಅವುಗಳ ನಡುವಿನ ಸ್ನೇಹ ‘ಉಕ್ಕಿಗಿಂತಲೂ ಗಟ್ಟಿಯಾಗಿದೆ’ ಎಂದು ಚೀನಾದ ಉಪ ಪ್ರಧಾನಿ ವಾಂಗ್ ಯಾಂಗ್ ಹೇಳಿದ್ದಾರೆ.

ಅವರು ಸೋಮವಾರ ಪಾಕಿಸ್ತಾನದ ಸ್ವಾತಂತ್ರ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

‘‘ಚೀನಾ ಮತ್ತು ಪಾಕಿಸ್ತಾನಗಳು ಕಷ್ಟ ಕಾಲದಲ್ಲಿ ಜೊತೆ ಜೊತೆಯಾಗಿ ನಿಂತಿವೆ. ಅವುಗಳ ಸ್ನೇಹವು ಕಾಲದ ಪರೀಕ್ಷೆಯನ್ನು ಎದುರಿಸಿ ಗೆದ್ದಿದೆ ಹಾಗೂ ಹೊಸ ತಲೆಮಾರಿಗೆ ಮುಂದುವರಿಯುತ್ತಿದೆ’’ ಎಂದು ವಾಂಗ್ ಯಾಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News