×
Ad

ಬ್ಯಾರೀಸ್ ಕಾಲೇಜ್: ಸ್ವಚ್ಛ ಭಾರತ, ಎನ್.ಎಸ್.ಎಸ್ ಕಾರ್ಯಕ್ರಮ

Update: 2017-08-14 22:40 IST

ಕುಂದಾಪುರ, ಆ. 14: ಬ್ಯಾರೀಸ್ ಕಾಲೇಜಿನಲ್ಲಿ ಸ್ವಚ್ಛ ಭಾರತ ಮತ್ತು ಎನ್.ಎಸ್.ಎಸ್. ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಈ ಸಂದರ್ಭ ಕುಂದಾಪುರದ ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕೃಷ್ಣ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ ನಮ್ಮ ದೇಶ ಕೈಗಾರಿಕೆಯಲ್ಲಿ, ವೈಧ್ಯಕೀಯ ರಂಗದಲ್ಲಿ, ಶೈಕ್ಷಣಿಕ ಕ್ಷೇತ್ರದಲ್ಲಿ ವಿಶ್ವವ್ಯಾಪಿ ಹೆಸರು ಗಳಿಸಿರುವಾಗ ಸ್ವಚ್ಚತೆಯ ವಿಚಾರದಲ್ಲಿ ಏಕೆ 127 ಸ್ಥಾನದಲ್ಲಿ ? ಕಸ ಮತ್ತು ಪ್ಲಾಸ್ಟಕ್ ಮುಕ್ತ ದೇಶವನ್ನಾಗಿಸುವ ಶಕ್ತಿ ಈ ಯುವ ಜನತೆಯಲ್ಲಿದೆ. ದೇಶದ ಅಭಿವೃದ್ಧಿಗೆ ಮಂಗಳ ಗ್ರಹಕ್ಕೆ ಯಾನದ ಮೊದಲು ನಮ್ಮ ಮನೆ ಅಂಗಳ ಸ್ವಚ್ಚತೆಯ ಜ್ಞಾನ ಬೇಕು. ಕಸ ವಿಲೆವಾರಿ ಜವಾಬ್ದಾರಿ ಹೊತ್ತ ವ್ಯಕ್ತಿಗಳನ್ನು ಗೌರವಿಸಬೇಕು, ಅವರಿಗೆ ಸರಿಯಾದ ಸಹಕಾರ ನೀಡಿ, ದೇಶವನ್ನು ಸ್ವಚ್ಚತೆ ಯಿಂದ ಅಭಿವೃದ್ಧಿ  ಪಡಿಸಲು ಇಂದಿನ ವಿದ್ಯಾರ್ಥಿಗಳಿಂದ ಸಾಧ್ಯವೆಂದು ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ  ಹಾಜಿ ಮಾಸ್ಟರ್ ಮೆಹಮೂದ್, ಕಾಲೇಜಿನ ಪ್ರಾಂಶುಪಾಲರಾದ ಡಾ. ಶವೀರ್ ಮತ್ತು ಯೋಜನಾಧಿಕಾರಿ ವಿದ್ಯಾಧರ್ ಪೂಜಾರಿ ಉಪಸ್ಥಿತರಿದ್ದರು.

ಯೋಜನಾಧಿಕಾರಿ ಸ್ವಾಗತಿ, ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಕವನಾ  ಕಾರ್ಯಕ್ರಮ ನಿರೂಪಿಸಿದರು.  ದ್ವಿತೀಯ ಬಿ.ಸಿ.ಎ. ವಿದ್ಯಾರ್ಥಿ ರಹ್ಮಾನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News