ಉ. ಕೊರಿಯಕ್ಕೆ ಕ್ಷಿಪಣಿ ರೀಎಂಟ್ರಿ ತಂತ್ರಜ್ಞಾನ ಇನ್ನೂ ಸಿದ್ಧಿಸಿಲ್ಲ: ದಕ್ಷಿಣ ಕೊರಿಯ ರಕ್ಷಣಾ ಸಚಿವ

Update: 2017-08-14 17:17 GMT

ಸಿಯೋಲ್, ಆ. 14: ಕ್ಷಿಪಣಿಯೊಂದು ಭೂಮಿಯ ವಾತಾವರಣವನ್ನು ಮರು ಪ್ರವೇಶಿಸುವ (ರೀಎಂಟ್ರಿ) ತಂತ್ರಜ್ಞಾನವನ್ನು ಉತ್ತರ ಕೊರಿಯ ಇನ್ನೂ ಕರಗತ ಮಾಡಿಕೊಂಡಿಲ್ಲ ಹಾಗೂ ಇದನ್ನು ಸಾಧಿಸಲು ಅದಕ್ಕೆ ಇನ್ನೂ ಒಂದೆರಡು ವರ್ಷಗಳು ಬೇಕಾಗಬಹುದು ಎಂದು ದಕ್ಷಿಣ ಕೊರಿಯದ ಉಪ ರಕ್ಷಣಾ ಸಚಿವ ಸುಹ್ ಚೂ-ಸುಕ್ ಹೇಳಿದ್ದಾರೆ.

ಆದಾಗ್ಯೂ, ಪರಮಾಣು ಸಿಡಿತಲೆಯೊಂದನ್ನು ಕಿರಿದುಗೊಳಿಸುವ ಅದರ ಸಾಮರ್ಥ್ಯ ದಿನೇ ದಿನೇ ವೃದ್ಧಿಗೊಳ್ಳುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

‘‘ಮೆಟೀರಿಯಲ್ ಇಂಜಿನಿಯರಿಂಗ್ ಪರಿಭಾಷೆಯಲ್ಲಿ ಹೇಳಲಾಗುವ ‘ರೀಎಂಟ್ರಿ’ ತಂತ್ರಜ್ಞಾನವನ್ನು ಉತ್ತರ ಕೊರಿಯ ಸಂಪೂರ್ಣವಾಗಿ ಕರಗತಮಾಡಿಕೊಂಡಿದೆ ಎಂದು ಅಮೆರಿಕ ಮತ್ತು ದಕ್ಷಿಣ ಕೊರಿಯಗಳು ನಂಬುವುದಿಲ್ಲ’’ ಎಂದು ರವಿವಾರ ಕೊರಿಯ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್‌ನಲ್ಲಿ ಮಾತನಾಡುತ್ತಾ ಅವರು ಹೇಳಿದರು.

‘‘ಆ ಹಂತವನ್ನು ಅವರು ತಲುಪಿದ್ದಾರೆ ಎಂದು ನಾವು ಭಾವಿಸುವುದಿಲ್ಲ. ಆದರೆ, ಅವರು ಅದನ್ನು ಸಮೀಪಿಸುತ್ತಿದ್ದಾರೆ ಎನ್ನುವುದು ಸತ್ಯ. ಅವರಿಗೆ ಅದು ಯಾವಾಗ ಸಾಧ್ಯವಾಗುತ್ತದೆ ಎಂಬುದನ್ನು ನಿಖರವಾಗಿ ಹೇಳಲಾಗದು. ಆದರೆ, ಅದಕ್ಕೆ ಕನಿಷ್ಠ ಒಂದೆರಡು ವರ್ಷ ಬೇಕಾಗುತ್ತದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News