ಬಿ.ಮೂಡ ಸರಕಾರಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ 71ನೇ ಸ್ವಾತಂತ್ರ್ಯೋತ್ಸವ ಆಚರಣೆ

Update: 2017-08-15 11:01 GMT

ವಿಟ್ಲ,ಆ.15 : ರಾಜಕೀಯ ಅಧಿಕಾರ, ಶೈಕ್ಷಣಿಕ ಹಾಗೂ ನಾಗರಿಕ ಸೇವಾ ಹುದ್ದೆಗಳು ಸಮಾಜದ ಅತ್ಯಂತ ತಳಮಟ್ಟದ ಜನರ ಕೈಗೆಟುಕುವವರೆಗೂ ಈ ದೇಶದ ಸ್ವಾತಂತ್ರ್ಯಕ್ಕೆ ನೈಜ ಅರ್ಥ ಬರಲು ಸಾಧ್ಯವಿಲ್ಲ ಎಂದು ಬಂಟ್ವಾಳ ಪುರಸಭಾ ಸದಸ್ಯ ಮುಹಮ್ಮದ್ ಇಕ್ಬಾಲ್ ಐಎಂಆರ್ ಗೂಡಿನಬಳಿ ಹೇಳಿದರು.

ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ದೇಶದ 71ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ವಿವಿಧ ಸರಕಾರಗಳು ದೇಶದಲ್ಲಿ ಆಡಳಿತ ನಡೆಸಿದರೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಇಂದಿಗೂ ಅನ್ಯಾಯವಾಗುತ್ತಲೇ ಇದೆ. ಭ್ರಷ್ಟಾಚಾರ-ಕೋಮುವಾದಗಳು ಈ ದೇಶದ ಜಾತ್ಯಾತೀತತೆ ಹಾಗೂ ಸಾಹೋದರ್ಯತೆಗೆ ಡೊಡ್ಡ ಸವಾಲಾಗಿ ಪರಿಣಮಿಸಿದೆ. ಇವುಗಳನ್ನು ಪರಿಣಾಮಕಾರಿಯಾಗಿ ಮಟ್ಟ ಹಾಕುವವರೆಗೆ ಹಾಗೂ ಸಮಾಜದ ತಳಮಟ್ಟದ ಜನರ ಕೈಗೆ ಅಧಿಕಾರ ಹಾಗೂ ಶೈಕ್ಷಣಿಕ ಹಾಗೂ ನಾಗರಿಕ ಸೇವಾ ಹುದ್ದೆಗಳಾದ ಐಎಎಸ್, ಐಪಿಎಸ್, ಐಎಫ್‍ಎಸ್, ಕೆಎಎಸ್ ಮೊದಲಾದವುಗಳು ತಲುಪುವವರೆಗೂ ಈ ದೇಶದಲ್ಲಿ ಸಮಗ್ರ ಅಭಿವೃದ್ದಿ ಸಾಧ್ಯವಿಲ್ಲ ಎಂದವರು ವಿಶ್ಲೇಷಿಸಿದರು.

ಕಾಲೇಜು ಆಡಳಿತ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮ್‍ಪ್ರಕಾಶ್ ಡಿ'ಕ್ರೂಝ್ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಸದಸ್ಯರಾದ ಜಗದೀಶ್ ಕುಂದರ್, ಲೋಕೇಶ್ ಪೂಜಾರಿ ಅಲೆತ್ತೂರು, ಲೋಲಾಕ್ಷ ಶೆಟ್ಟಿ, ಕಾಲೇಜು ಆಡಳಿತ ಸಮಿತಿ ಸದಸ್ಯರಾದ ಲತೀಫ್ ಖಾನ್ ಗೂಡಿನಬಳಿ, ರಮೇಶ್ ಪೂಜಾರಿ ಪೂಂಜರಕೋಡಿ, ಸುಧಾಕರ ಮಡಿವಾಳ, ಪತ್ರಕರ್ತ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಮೊದಲಾದವರು ಭಾಗವಹಿಸಿದ್ದರು.

ಕಾಲೇಜು ಉಪನ್ಯಾಸಕರಾದ ಯೂಸುಫ್ ವಿಟ್ಲ ಸ್ವಾಗತಿಸಿ, ದಾಮೋದರ್ ವಂದಿಸಿದರು. ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ವಿವಿಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News