ಉಳ್ಳಾಲ ದರ್ಗಾ ವಠಾರದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Update: 2017-08-15 13:35 GMT

ಉಳ್ಳಾಲ, ಆ.15: ಉಳ್ಳಾಲ ಜುಮಾ ಮಸೀದಿ ಮತ್ತು  ಸೈಯದ್ ಮದನಿ  ದರ್ಗಾ ಸಮಿತಿ ಆಶ್ರಯದಲ್ಲಿ 71ನೇ ಸ್ವಾತಂತ್ರೋತ್ಸವವನ್ನು ದರ್ಗಾ ವಠಾರದಲ್ಲಿ ಆಚರಿಸಲಾಯಿತು.

ಉಳ್ಳಾಲ ಸೈಯದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಉಳ್ಳಾಲ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಏಕತೆಯೇ ನಮ್ಮ ಮೂಲ ಉದ್ದೇಶವಾಗಿರಬೇಕು. ನಮ್ಮಲ್ಲಿ ಪರಸ್ಪರ ದ್ವೇಷ ಸಾಧನೆ, ಅಸೂಯೆಗಳು ಉಂಟಾದಲ್ಲಿ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ದೇಶದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಖತೀಬರಾದ ಶಮೀಮ್ ಸಖಾಫಿ ದುಆ ನೆರವೇರಿಸಿದರು. ಸೈಯದ್ ಮದನಿ ಕಾಲೇಜು ಆಫ್ ಇಸ್ಲಾಮಿಕ್ ಸೈನ್ಸ್ ವಿದ್ಯಾರ್ಥಿಗಳಿಂದ ದೇಶ ಭಕ್ತಿಗೀತೆ, ಹಿಫ್ಲುಲ್ ಕುರಾನ್ ವಿದ್ಯಾರ್ಥಿಗಳಿಂದ ಸ್ಕೌಟ್ ಪ್ರದರ್ಶನ ನಡೆಯಿತು.

ಈ ಸಂದರ್ಭ ಸೈಯದ್ ಮದನಿ ಅರಬಿಕ್ ಟ್ರಸ್ಟ್ ಮುಫತ್ತಿಶ್ ಸುಲೈಮಾನ್ ಸಖಾಫಿ, ಕಾಲೇಜು ಪ್ರಾಂಶುಪಾಲರಾದ ಇಬ್ರಾಹೀಂ ಅಹ್ಸನಿ, ಮಜೀದ್ ಸಖಾಫಿ, ದರ್ಗಾ ಉಪಾಧ್ಯಕ್ಷ ಯು.ಕೆ. ಮೋನು, ಇಸ್ಮಾಯೀಲ್, ಹಾಜಿ ಬಾವ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹ, ಕೋಶಾಧಿಕಾರಿ ಯು.ಕೆ ಇಲ್ಯಾಸ್, ಅಡಿಟರ್ ಯು.ಟಿ. ಇಲ್ಯಾಸ್, ಜತೆ ಕಾರ್ಯದರ್ಶಿ ನೌಶಾದ್ ಮೇಲಂಗಡಿ, ಆಝಾದ್ ಇಸ್ಮಾಯೀಲ್, ಸೈಯದ್ ಮದನಿ ಅರಬಿಕ್ ಟ್ರಸ್ಟ್ ಉಪಾಧ್ಯಕ್ಷ ಹಾಜಿ ಯು.ಎಚ್ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಅಮೀರ್ ಹಾಜಿ, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫ ಅಬ್ದುಲ್ಲ, ಸದಸ್ಯರಾದ ಫಾರೂಕ್ ಉಳ್ಳಾಲ, ಅಲೀ ಮೋನು, ಕುಂಞಿ ಅಹ್ಮದ್, ಹಾಜಿ ಮೊಯ್ದಿನಬ್ಬ ಪೇಟೆ ಸೇರಿದಂತೆ ಹಲವು  ಸಮಿತಿ ಸದಸ್ಯರು, ಜಮಾಅತ್ ಸದಸ್ಯರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News