ಕುದುರೆಕೆರೆ ಬೆಟ್ಟಿನಲ್ಲಿ ಸ್ವಾತಂತ್ರ್ಯೋತ್ಸವ
Update: 2017-08-15 20:21 IST
ಕುಂದಾಪುರ, ಆ.15: ಕೋಟೇಶ್ವರದ ಕುದುರೆಕೆರೆಬೆಟ್ಟಿನ ಶ್ರೀಆದಿಪರಾಶಕ್ತಿ ಸ್ವರ್ಣ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ವಾಸ್ತುತಜ್ಞ ಬಸವರಾಜ್ ಶೆಟ್ಟಿಗಾರ್‌ರವರು ಧ್ವಜಾರೋಹಣ ನೆರವೇರಿಸಿ ದರು. ಅಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ನಾಗರಾಜ್ ಶೇರೆಗಾರ್ ವಹಿಸಿದ್ದರು. ಧರ್ಮದರ್ಶಿ ಆನಂದ ಶೇರೆಗಾರ್, ಉದ್ಯಮಿ ರಮೇಶ್ ಆಚಾರ್ಯ, ಜಗದೀಶ್ ಗಾಣಿಗ, ಅಮೀತ್ ಅಮೃತರಾವ್, ಸುರೇಂದ್ರ ಆಚಾರ್ಯ, ಮಹಮ್ಮದ್ ರಝಾಕ್ ಉಪಸ್ಥಿತರಿದ್ದರು.
ದೇವಸ್ಥಾನದ ಅರ್ಚಕ ಗುರುರಾಜ್ ಸ್ವಾಗತಿಸಿದರು. ರವೀಂದ್ರ ವಂದಿಸಿದರು.