ಕೋಡು ಶ್ರೀದುರ್ಗಾಂಬಿಕಾ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ
Update: 2017-08-15 20:24 IST
ಶಿರ್ವ, ಆ.15: ಕೋಡು ಶ್ರೀದುರ್ಗಾಂಬಿಕಾ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಜರುಗಿದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಧ್ವಜಾರೋಹಣಗೈದರು.
ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಹೆಗ್ಡೆ, ನಿವೃತ್ತ ಶಿಕ್ಷಕರಾದ ಲಕ್ಷ್ಮಣ ನಾಯಕ್, ಗೋಪಾಲ ವೈ., ಅಂತೋನಿ ನಜ್ರೆತ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧೀರಜ್ ಶೆಟ್ಟಿ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ವಸಂತ ಪೂಜಾರಿ, ಗ್ರಾಪಂ ಸದಸ್ಯರಾದ ಮೇರಿ ಕಸ್ತಲಿನೊ, ರಾಜೇಶ್ ಶೆಟ್ಟಿ, ರಾಜೇಶ್ ಕುಲಾಲ್, ಶಿರ್ವ ಜೇಸಿಐ ಅಧ್ಯಕ್ಷ ವಲದೂರು ಪ್ರಸಾದ್ ಶೆಟ್ಟಿ, ವಲದೂರು ವೆಲ್ಫೇರ್ ಎಸೋಸಿಯೇಶ್ ಕಾರ್ಯದರ್ಶಿ ಸುಕೇಶ್ ವಲದೂರು, ಶಾಲಾ ಮುಖ್ಯ ಶಿಕ್ಷಕಿ ಸುಮತಿ ಎನ್. ಉಪಸ್ಥಿತರಿದ್ದರು.