ಪಕ್ಷದಿಂದ ವಜಾಗೊಳಿಸುವ ಪರಿಸ್ಥಿತಿಯನ್ನು ಶರದ್‍ಯಾದವ್ ಸೃಷ್ಟಿಸಿದ್ದಾರೆ: ಕೆ.ಸಿ ತ್ಯಾಗಿ

Update: 2017-08-15 15:16 GMT

ಪಾಟ್ನ,ಆ.15: ಜೆಡಿಯು ಮಾಜಿ ಅಧ್ಯಕ್ಷ ಶರದ್‍ಯಾದವ್‍ರನ್ನು   ಜೆಡಿಯು ಪ್ರಧಾನಕಾರ್ಯದರ್ಶಿ ಕೆ.ಸಿ. ತ್ಯಾಗಿ  ಟೀಕಿಸಿದ್ದು,   ಶರದ್‍ಯಾದವ್ ಅವರನ್ನು ಪಕ್ಷದಿಂದ ಹೊರಹಾಕುವಂತಹ ಪರಿಸ್ಥಿತಿಯನ್ನು ಅವರೇ ಸೃಷ್ಟಿಸಿದ್ದಾರೆ. ವಿಪಕ್ಷ ನಾಯಕ ಲಾಲುಪ್ರಸಾದ್‍ರೊಂದಿಗೆ ಶಾಮೀಲಾಗಿ ತನ್ನ ಪಕ್ಷದ ವಿರುದ್ಧ ಮಾತಾಡುತ್ತಿದ್ದಾರೆ ಎಂದು ಹೇಳಿದರು. ಈಗಾಗಲೇ ಶರದ್ ಯಾದವ್ ಆಗಸ್ಟ್ 19ಕ್ಕೆ ನಡೆಯಲಿರುವ ಜೆಡಿಯು ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ.

 ವರದಿಯಾಗಿರುವ ಪ್ರಕಾರ ಶರದ್ ಯಾದವ್ ಆಗಸ್ಟ್ 27ಕ್ಕೆ ನಡೆಯಲಿರುವ ಆರ್‍ಜೆಡಿಯ ‘ಬಿಜೆಪಿ ಭಗಾವೊ’( ಬಿಜೆಪಿಯನ್ನು ಓಡಿಸಿರಿ) ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.  ಇದನ್ನು ಉಲ್ಲೇಖಿಸಿದ ಕೆ.ಸಿ.ತ್ಯಾಗಿ, ನಿತೀಶ್ ಕುಮಾರ್ ಸರಕಾರವನ್ನು ಕಿತ್ತುಹಾಕಲು ಬಯಸುವವರೊಂದಿಗೆ ಶರದ್‍ಯಾದವ್ ಕೈಜೋಡಿಸಿದ್ದಾರೆ. ಆದರೆ ಜೆಡಿಯು ಸಂಪೂರ್ಣ ನಿತೀಶ್ ಕುಮಾರ್ ಜೊತೆಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News