ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳನ್ನು ನೆನಪಿಸಿಕೊಳ್ಳಿ: ಲೆ.ಕ. ಗೀತಾಲಕ್ಷ್ಮೀ
ಶಿರೂರು,ಆ.15: ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ನಮ್ಮ ಮಹಾನ್ ನಾಯಕರು ಮಾಡಿರುವ ತ್ಯಾಗಗಳನ್ನು ನೆನಪಿಸಿಕೊಳ್ಳುವಂತೆ ಮತ್ತು ಅದನ್ನು ಮೌಲ್ಯಯುತವಾಗಿಸಲು ಹೊಣೆಗಾರಿಕೆಯ ಪ್ರಜೆಗಳಾಗುವಂತೆ ಭಾರತೀಯ ನೌಕಾಪಡೆಯ ಲೆಫ್ಟಿನಂಟ್ ಕಮಾಂಡರ್ ಗೀತಾಲಕ್ಷ್ಮೀ ಪಿ.ಎಂ. ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇಲ್ಲಿಯ ಗ್ರೀನ್‌ವ್ಯಾಲಿ ನ್ಯಾಷನಲ್ ಸ್ಕೂಲ್ ಮತ್ತು ಪಿ.ಯು.ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ದಿನದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅವರು, ಭವಿಷ್ಯದಲ್ಲಿ ಭಾರತವನ್ನು ವಿಶ್ವ ನಾಯಕನನ್ನಾಗಿ ರೂಪಿಸುವಲ್ಲಿ ತಮ್ಮ ಕೊಡುಗೆಗಳನ್ನು ನೀಡಲು ಕಠಿಣವಾಗಿ ಶ್ರಮಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ಇದಕ್ಕೂ ಮುನ್ನ ವರ್ಣರಂಜಿತ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿದರು.
ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ದೇಶಪ್ರೇಮದ ಗೀತೆಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ನಿಧಿ ನಾಯಕ್ ಆರಂಭದಲ್ಲಿ ಸ್ವಾಗತಿಸಿದರು. ವಿಂಧ್ಯಾ ಎಸ್. ವಂದಿಸಿದರು. ಮುಹಮ್ಮದ್ ರಯೀದ್ ಕಾರ್ಯಕ್ರಮಗಳ ಸಂಘಟನೆಯಲ್ಲಿ ಸಹಕರಿಸಿದ್ದರು.