ಉಡುಪಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
ಉಡುಪಿ, ಆ. 15: ಉಡುಪಿ ಜಿಲ್ಲೆಯ ವಿವಿಧೆಡೆ ಇಂದು ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಜಿಲ್ಲಾ ಸರಕಾರಿ ನೌಕರರ ಸಂಘ ಉಡುಪಿ: ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘ ಕಚೇರಿಯಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು. ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸರಕಾರಿ ನೌಕರರ ವಸತಿಗೃಹ: ಅಜ್ಜರಕಾಡಿನ ಲೋಕೋಪಯೋಗಿ ವಸತಿಗೃಹದ ವಠಾರದಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಇಂಜಿನಿಯರ್ ಎಸ್.ಕೆ.ಚಂದ್ರಶೇಖರ್ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು. ವಸತಿಗೃಹದ ನಿವಾಸಿಗಳು ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಇಲಾಖೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಡಿಎಚ್‌ಓ ಡಾ.ರೋಹಿಣಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಎಂ.ಜಿ.ರಾಮ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ರಾಮರಾವ್ ಹಾಗೂ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜಿಲ್ಲಾ ಗೃಹರಕ್ಷಕ ದಳ: ಉಡುಪಿ ಜಿಲ್ಲಾ ಗೃಹರಕ್ಷಕದಳದ ಕಚೇರಿಯಲ್ಲಿ ನಡೆದ ಸ್ವಾತಂತ್ರ ದಿನಾಚರಣೆಯಲ್ಲಿ ಜಿಲ್ಲಾ ಕಮಾಂಡೆಂಟ್ ಡಾ: ಕೆ. ಪ್ರಶಾಂತ್ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಗೃಹರಕ್ಷಕ ರಾಘವೇಂದ್ರ ಆಚಾರ್‌ರನ್ನು ಸನ್ಮಾನಿಸಲಾ ಯಿತು. ಅಧೀಕ್ಷಕಿ ಕವಿತಾ ಕೆ.ಸಿ ಮತ್ತು ಉಡುಪಿ ಘಟಕಾಧಿಕಾರಿ ಕುಮಾರ್ ಉಪಸ್ಥಿತರಿದ್ದರು.
ನಗರಸಭೆ: ಉಡುಪಿ ನಗರಸಭೆ ವತಿಯಿಂದ ನಡೆದ ಸ್ವಾತಂತ್ರೋತ್ಸವ ದಿನಾಚರಣೆಯಲ್ಲಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಧ್ವಜಾರೋಹಣ ನೆರವೇರಿಸಿದರು. ಪೌರಾಯುಕ್ತ ಡಿ.ಮಂಜುನಾಥಯ್ಯ, ಸದಸ್ಯರಾದ ಗೀತಾ ಶೇಟ್, ಜನಾರ್ದನ ಭಂಡಾರ್‌ಕರ್, ಶಾಂತಾರಾಮ್ ಸಾಲ್ವಲ್‌ಕರ್ ಮುಂತಾದವರು ಉಪಸ್ಥಿತರಿದ್ದರು.
ಮಣಿಪಾಲದ ಮಾಧವಕೃಪಾ ಶಾಲೆಯಲ್ಲಿ ನಡೆದ ಸ್ವಾತಂತ್ರ ದಿನಾಚರಣೆಯಲ್ಲಿ ಉಡುಪಿಯ ಪ್ರಸಿದ್ಧ ನ್ಯೂರೋಸರ್ಜನ್ ಡಾ.ಜಸ್ಪ್ರೀತ್ ಸಿಂಗ್ ದಿಲ್ ಧ್ವಜಾರೋಹಣ ಮಾಡಿ ಸಂದೇಶ ನೀಡಿದರು. ಶಾಲೆಯ ಪ್ರಾಂಶುಪಾಲೆ ಜೆಸ್ಸಿ ಆ್ಯಂಡ್ರೂವ್ಸ್, ಶಾಲಾ ಸಂಚಾಲಕ ಪಿ.ಜಿ.ಪಂಡಿತ್, ಉಪಪ್ರಾಂಶುಪಾಲೆ ಶಕಿಲಾಕ್ಷಿ ಕೃಷ್ಣ, ಜ್ಯೋತಿ ಸಂತೋಷ್ ಉಪಸ್ಥಿತರಿದ್ದರು.
ವಿದ್ಯೋದಯ ಟ್ರಸ್ಟ್ ವಿದ್ಯಾಸಂಸ್ಥೆಗಳು: ಉಡುಪಿ ವಿದ್ಯೋದಯ ಟ್ರಸ್ಟ್‌ನ ಅಂಗಸಂಸ್ಥೆಗಳಾದ ವಿದ್ಯೋದಯ ಪ.ಪೂ.ಕಾಲೇಜು, ವಿದ್ಯೋದಯ ಪಬ್ಲಿಕ್ ಸ್ಕೂಲ್, ವಿದ್ಯೋದಯ ವಿದ್ಯಾಲಯ, ಶ್ರೀಅನಂತೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಶ್ರೀಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳ ಸ್ವಾತಂತ್ರ ದಿನಾಚರಣೆಯಲ್ಲಿ ಟ್ರಸ್ಟ್‌ನ ಕಾರ್ಯದರ್ಶಿ ಕೆ.ಗಣೇಶ ರಾವ್ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್‌ನ ಕಾರ್ಯಾಧ್ಯಕ್ಷ ನಾಗರಾಜ ಬಲ್ಲಾಳ್, ರೂಪಾ ಬಲ್ಲಾಳ್, ಪದ್ಮರಾಜ ಆಚಾರ್ಯ, ಎಲ್ಲಾ ಶಾಲೆಗಳ ಪ್ರಾಂಶುಪಾಲರು, ಮುಖ್ಯೋಪಾದ್ಯಾಯರು ಉಪಸ್ಥಿತರಿದ್ದರು.