ಕಾಪು: ಪಿಎಫ್‌ಐಯಿಂದ ರಕ್ತದಾನ ಶಿಬಿರ
Update: 2017-08-15 21:51 IST
ಕಾಪು, ಆ.15: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾಪು ವಲಯದ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ ವನ್ನು ಇತ್ತೀಚೆಗೆ ಕೊಂಬಗುಡ್ಡೆ ಮದರಸದಲ್ಲಿ ಏರ್ಪಡಿಸಲಾಗಿತ್ತು.
ಈ ಶಿಬಿರವನ್ನು ಕೊಂಬಗುಡ್ಡೆ ಗೌಸಿಯಾ ಜಾಮೀಯ ಮಸೀದಿಯ ವೌಲಾನ ಅಬ್ದುಲ್ ಹಕೀಂ ಉದ್ಘಾಟಿಸಿದರು. ಅತಿಥಿಗಳಾಗಿ ಜಿಲ್ಲಾಸ್ಪತ್ರೆ ರಕ್ತನಿಧಿನಿಯ ಮುಖ್ಯಸ್ಥೆ ಡಾ.ವೀಣಾ ಕುಮಾರಿ, ಎಸ್‌ಡಿಪಿಐ ಜಿಲ್ಲಾ ಕಾರ್ಯ ದರ್ಶಿ ಅಬ್ದುಲ್ ರೆಹಮಾನ್ ಮಲ್ಪೆ, ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಪಿಎಫ್‌ಐ ಕಮ್ಯೂನಿಟಿ ಡೆವಲಪ್ ಮೆಂಟ್‌ನ ಮುನೀರ್ ಕಲ್ಮಾಡಿ, ಮಸೀದಿ ಅಧ್ಯಕ್ಷ ನಾಸೀ್, ಸಾದಿಕ್ ದೀನಾರ್ ಉಪಸ್ಥಿತರಿದ್ದರು.
ಪಿಎಫ್‌ಐ ಕಾಪು ವಲಯ ಅಧ್ಯಕ್ಷ ಸಾಧಿಕ್ ಕೆ.ಪಿ. ಸ್ವಾಗತಿಸಿದರು. ಶಿಬಿರದಲ್ಲಿ ಒಟ್ಟು 107 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.