×
Ad

ಕಲ್ಮಾಡಿ ಚರ್ಚಿನ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವ

Update: 2017-08-15 21:54 IST

ಉಡುಪಿ, ಆ.15: ರಾಷ್ಟ್ರಕ್ಕಾಗಿ ಉತ್ತಮ ಕೆಲಸವನ್ನು ಮಾಡುವುದರೊಂದಿಗೆ ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದಾಗ ನಿಜವಾದ ಸ್ವಾತಂತ್ರ್ಯವನ್ನು ಪ್ರತಿಯೊಬ್ಬರು ಸಂಭ್ರಮಿಸಿದಂತಾಗುತ್ತದೆ ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.

ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚಿನಲ್ಲಿ ಮಂಗಳವಾರ ವಾರ್ಷಿಕ ಪ್ರತಿ ಷ್ಠಾಪನಾ ಮಹೋತ್ಸವದ ಪ್ರಧಾನ ಬಲಿಪೂಜೆಯನ್ನು ಅರ್ಪಿಸಿ ಅವರು ಸಂದೇಶ ನೀಡಿದರು. ನಮ್ಮಲ್ಲಿನ ಕೆಟ್ಟ ಚಟಗಳನ್ನು ಬಿಟ್ಟು ಹೊಸ ಜೀವನದ ನಡೆಸುವುದೇ ನಿಜವಾದ ಸ್ವಾತಂತ್ರ್ಯವಾಗಿದೆ. ದೇಶ ಇಂದು ಹಲವರು ಸಮಸ್ಯೆಗಳಿಗೆ ಸಿಲುಕಿ ಒದ್ದಾಡುತ್ತಿದ್ದು, ಅದರಿಂದ ಮುಕ್ತವಾಗಬೇಕಾದ ಅಗತ್ಯ ಇದೆ ಎಂದರು.

ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ 7 ಗಂಟೆಗೆ ಕೊಂಕಣಿ ಹಾಗೂ 4 ಗಂಟೆಗೆ ಕನ್ನಡ ಮತ್ತು ಆರು ಗಂಟೆಗೆ ಇಂಗ್ಲಿಷ್ ಭಾಷೆಯಲ್ಲಿ ಬಲಿಪೂಜೆಗಳು ಜರಗಿ ದವು. ಪ್ರಧಾನ ಬಲಿಪೂಜೆಯ ವೇಳೆ ದಾನಿಗಳಿಗೆ ಗೌರವಿಸಲಾಯಿತು. ಅಲ್ಲದೆ ಭಾಗವಹಿಸಿದ ಪ್ರತಿಯೊಬ್ಬ ಭಕ್ತಾಧಿಗಳಿಗೂ ಅನ್ನ ಸಂತರ್ಪಣೆ ಏರ್ಪಡಿಸ ಲಾಗಿತ್ತು. ಇಡೀ ದಿನದ ವಿವಿಧ ಬಲಿಪೂಜೆಗಳಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಭಕ್ತಾಧಿಗಳು ಭಾಗವಹಿಸಿದ್ದರು.

ಪ್ರಧಾನ ಬಲಿಪೂಜೆಯಲ್ಲಿ ಉಡುಪಿ ವಲಯ ಪ್ರಧಾನ ಧರ್ಮಗುರು ವಂ. ವಲೇರಿಯನ್ ಮೆಂಡೊನ್ಸಾ, ಉಜ್ವಾಡ್ ಪತ್ರಿಕೆಯ ಸಂಪಾದಕ ವಂ.ಚೇತನ್ ಲೋಬೊ, ಮಣಿಪಾಲ ಚರ್ಚಿನ ವಂ.ಫೆಡ್ರಿಕ್ ಡಿಸೋಜ, ತೊಟ್ಟಾಂ ಚರ್ಚಿನ ವಂ.ಫ್ರಾನ್ಸಿಸ್ ಕರ್ನೇಲಿಯೋ, ಉಡುಪಿ ಸಹಾಯಕ ಧರ್ಮಗುರು ವಂ. ವಿಜಯ್ ಡಿಸೋಜ, ಕಲ್ಮಾಡಿ ಚರ್ಚಿನ ಧರ್ಮಗುರು ವಂ.ಆಲ್ಬನ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಕಾರ್ಯ ದರ್ಶಿ ಶೋಭಾ ಮೆಂಡೊನ್ಸಾ, ಪಾಲನಾ ಸಮಿಯ ಪದಾಧಿಕಾರಿಗಳು, ಯುವ ಸಂಘಟನೆಯ ಕಾರ್ಯಕರ್ತರು, ಇತರ ಸ್ವಯಂಸೇವಕರು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News