×
Ad

ಕಾಟಿಪಳ್ಳ 4ನೇ ಬ್ಲಾಕಿನ ಮದ್ರಸದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

Update: 2017-08-15 22:21 IST

ಮಂಗಳೂರು, ಆ. 15: ಕಾಟಿಪಳ್ಳ 4ನೇ ಬ್ಲಾಕಿನ ಅಲ್-ಬದ್ರಿಯಾ ಮದ್ರಸದಲ್ಲಿ 71ನೇ ಸ್ವಾತಂತ್ರವನ್ನು ಆಚರಿಸಲಾಯಿತು.

ಈ ಸಂಧರ್ಭ  ಖತೀಬರಾದ ಉಮರ್ ಫಾರೂಕ್ ಅಹ್ಸನಿ ಧ್ವಜಾರೋಹಣಗೈದರು ಬಳಿಕ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ದೊರಕಲು ಜಾತಿ ಮತ ಭೇದವಿಲ್ಲದೆ ಎಲ್ಲರೂ ಕೂಡಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ. ಹಾಗೂ ದೇಶದ ತ್ರಿವರ್ಣ ಧ್ವಜದ ಸಂದೇಶವು ಶಾಂತಿ ಸಂಕೇತವಾಗಿದೆಯೆಂದರು. ಈ ಸಂಧರ್ಭ ಮದ್ರಸ ಸಮಿತಿಯವರು ಉಪಸ್ಥಿತರಿದ್ದರು. ಮದ್ರಸ ಮಕ್ಕಳು ರಾಷ್ಟ್ರಗೀತೆಯನ್ನು ಹಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News