ದೇರಳಕಟ್ಟೆ ಸಲಫಿ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ
Update: 2017-08-15 22:23 IST
ಮಂಗಳೂರು, ಆ. 15: ಸೌತ್ ಕರ್ನಾಟಕ ಸಲಫಿ ಮೂವ್‍ಮೆಂಟ್ ದೇರಳಕಟ್ಟೆ ಘಟಕದ ವತಿಯಿಂದ ಸ್ಥಳೀಯ ಮಸೀದಿಯ ಪ್ರಾಂಗಣದಲ್ಲಿ ಸ್ವಾತಂತ್ರ್ಯೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.
ಎಸ್.ಕೆ.ಎಸ್.ಎಮ್. ನ ಕೇಂದ್ರ ಸಮಿತಿ ಉಪಾಧ್ಯಕ್ಷ ಇಸ್ಮಾಯಿಲ್ ಶಾಫಿ ಧ್ವಜಾರೋಹಣಗೈದರು. ನಿವೃತ್ತ ಕಂದಾಯ ಅಧಿಕಾರಿ ಶ್ರೀ ನಾರಾಯಣ ಶೆಟ್ಟಿ, ಮಾಜಿ ಜಿ.ಪಂ. ಸದಸ್ಯ ಅಝೀಝ್ ಮಲಾರ್ ಮತ್ತು ಮಸೀದಿಯ ಇಮಾಂ ಅಬ್ದುಲ್ ಹಕೀಂ ಮೌಲವಿ ಮುಖ್ಯ ಅತಿಥಿಗಳಾಗಿದ್ದರು. ಸ್ಥಳೀಯ ಸಲಫಿ ಮಸೀದಿ ಅಧ್ಯಕ್ಷ ಡಿ. ಮುಹಮ್ಮದ್ ಯಾಸೀನ್ ಅಧ್ಯಕ್ಷತೆ ವಹಿಸಿದ್ದರು. ಘಟಕದ ಕಾರ್ಯದರ್ಶಿ ಅಹ್ಮದ್ ಮಾಸ್ತರ್ ಪ್ರಾರಂಭದಲ್ಲಿ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.