×
Ad

ಮಾಬುಕಳದಿಂದ ಕುಂದಾಪುರಕ್ಕೆ ಕಾಲ್ನಡಿಗೆ ಜಾಥಾ

Update: 2017-08-15 22:26 IST

ಕೋಟ, ಆ.15: ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಕುಂದಾಪುರದ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾವು ಕುಂದಾಪುರ ವಿಧಾನಸಭಾ ಕ್ಷೇತ್ರದ ಗಡಿ ಪ್ರದೇಶವಾದ ಮಾಬುಕಳದಿಂದ ಕುಂದಾಪುರದವರೆಗೆ ಕಾಲ್ನಡಿಗೆ ಜಾಥಾದೊಂದಿಗೆ ಬೃಹತ್ ಸಮಾವೇಶ ಆ.16ರಂದು ಬೆಳಗ್ಗೆ 8.30ಕ್ಕೆ ಹಮ್ಮಿಕೊಂಡಿದೆ.

 94ಸಿಸಿ, ಅಕ್ರಮ ಸಕ್ರಮ ಹಕ್ಕು ಪತ್ರ, ಪಡಿತರ ಗೊಂದಲ, ಅಸಮರ್ಪಕ ಮರಳು ನೀತಿ ಸೇರಿದಂತೆ ಬಡವರ ವಿರೋಧಿ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ ಎಂದವರು ತಿಳಿಸಿದರು.

ಜಾಥವು ಮಾಬುಕಳ, ಸಾಸ್ತಾನ, ಕೋಟ, ತೆಕ್ಕಟ್ಟೆ, ಕೋಟೇಶ್ವರದಲ್ಲಿ ಜನಜಾಗ್ರತಿ ಸಭೆಗಳನ್ನು ನಡೆಸಲಿದ್ದು, ಸಂಜೆ ಕುಂದಾಪುರದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News