×
Ad

ಚಾರ್ಮಾಡಿ: ಮುಹಿಯುದ್ದೀನ್ ಜುಮಾ ಮಸೀದಿ, ಇಝ್ಝತುಲ್ ಇಸ್ಲಾಂ ಮದ್ರಸ ವತಿಯಿಂದ ಸ್ವಾತಂತ್ರ್ಯೋತ್ಸವ

Update: 2017-08-15 23:14 IST

ಚಾರ್ಮಾಡಿ, ಆ. 15: ಮುಹಿಯುದ್ದೀನ್ ಜುಮಾ ಮಸೀದಿ, ಇಝ್ಝತುಲ್ ಇಸ್ಲಾಂ ಮದ್ರಸ ಹಾಗೂ ಎಸ್ ಕೆ ಎಸ್ ಬಿ ವಿ ಜಲಾಲಿಯ ನಗರ, ಚಾರ್ಮಾಡಿ ಇದರ ಜಂಟಿ ಆಶ್ರಯದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.

ಧ್ವಜಾರೋಹಣವನ್ನು ಜಮಾಅತ್ ಅಧ್ಯಕ್ಷ ಅಬ್ದುಲ್ ಖಾದರ್ ಫಾಲ್ಕಾನ್ ನೆರವೇರಿಸಿದರು. ಮಸೀದಿಯ ಖತೀಬ್ ಅಬ್ಬಾಸ್ ಫೈಝಿ ದಿಡುಪೆ ಸಂದೇಶ ಭಾಷಣ ಮಾಡಿದರು. ಜಮಾಅತ್ ಕಾರ್ಯದರ್ಶಿ ಮೂಸ ಕುಂಞಿ ಬ್ಯಾರಿ ಸ್ವಾಗತಿಸಿದರು. ಮದ್ರಸ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು.

ಈ ಸಂದರ್ಭ ಎಸ್ ಕೆ ಎಸ್ ಎಸ್ ಎಫ್ ಜಲಾಲಿಯ ನಗರ ಶಾಖೆ ಅಧ್ಯಕ್ಷ ಅಬ್ಬಾಸ್ ಹೊಸಗಂಡಿ, ಮುಹಿಯುದ್ದೀನ್ ಯಂಗ್ ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಸ್ವಾದಿಕ್ ಕಲ್ಲಡ್ಕ, ಕಾರ್ಯದರ್ಶಿ ಅಬ್ದುಲ್ ಖಾದರ್ ಎವರೆಸ್ಟ್, ಮದ್ರಸದ ಪ್ರಧಾನ ಅಧ್ಯಾಪಕ ಅಬೂಸ್ವಾಲಿಹ್ ಕೌಸರಿ, ಮುಅಲ್ಲಿಮ್ ಹಮೀದ್ ಮುಸ್ಲಿಯಾರ್ ಹಾಗು ಆಡಳಿತ ಸಮಿತಿಯ ಸದಸ್ಯರು, ಊರಿನ ಪ್ರಮುಖರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

ಎಸ್ ಕೆ ಎಸ್ ಬಿ ವಿ ಅಧ್ಯಕ್ಷ ಮುಹಮ್ದ್ ಸಅದ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

Writer - ಉಮರ್ ಫಾರೂಕ್ ಚಾರ್ಮಾಡಿ

contributor

Editor - ಉಮರ್ ಫಾರೂಕ್ ಚಾರ್ಮಾಡಿ

contributor

Similar News