ಕಾರ್ಮಿಕರ ಬೇಡಿಕೆ ಈಡೇರಿಕೆಗಾಗಿ ಸಿಐಟಿಯು ಧರಣಿ
Update: 2017-08-15 23:57 IST
ಭಟ್ಕಳ, ಆ. 15: ಕಾರ್ಮಿಕರ ನ್ಯಾಯಯುತ ಬೇಡಿಕೆಯನ್ನುಈಡೇರಿಸುವಂತೆ ಒತ್ತಾಯಿಸಿ ತಾಲೂಕಿನ ತಹಸೀಲ್ದಾರರ ಕಚೇರಿಯಎದುರು ಸಿಐಟಿಯು ಕಾರ್ಯಕರ್ತರುಧರಣಿ ನಡೆಸಿ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಕಾರ್ಮಿಕರಿಗೆ ರು.18000 ಕೂಲಿಯನ್ನು ನಿಗದಿಪಡಿಸಬೇಕು, ಎಲ್ಲರಿಗೂಉದ್ಯೋಗ ಭದ್ರತೆಯನ್ನುಒದಗಿಸಬೇಕು ಎಂಬ ಬೇಡಿಕೆ ಸೇರಿದಂತೆ ಕಳೆದ ಕೆಲವು ತಿಂಗಳುಗಳಿಂದ ಕಾರ್ಮಿಕರ ಬೇಡಿಕೆಗಳನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮುಂದೆಇಡುತ್ತ ಬಂದಿದ್ದೇವೆ. ಕಾರ್ಮಿಕರ ಬೇಡಿಕೆಗಳು ಸರಕಾರದ ಬಳಿ ಇದ್ದು, ಮುಖ್ಯಮಂತ್ರಿಗಳು ಮಧ್ಯೆ ಪ್ರವೇಶಿಸಿ ನ್ಯಾಯಒದಗಿಸಬೇಕುಎಂದುಕಾರ್ಮಿಕರು ಆಗ್ರಹಿಸಿದರು.
ತಹಸೀಲ್ದಾರ ವಿ.ಎನ್.ಬಾಡ್ಕರ್ ಮನವಿ ಪತ್ರವನ್ನು ಸ್ವೀಕರಿಸಿದರು. ಸಿಐಟಿಯು ಮುಖಂಡರಾದ ಮಾಸ್ತಿ ನಾಯ್ಕ, ಗೀತಾಗಣಪತಿ ನಾಯ್ಕ, ಸುಧಾ ಭಟ್ ಮೊದಲಾದವರು ಉಪಸ್ಥಿತರಿದ್ದರು.