ಜೋಕಟ್ಟೆ ಫ್ರೆಂಡ್ಸ್ ಕ್ಲಬ್ ವತಿಯಿಂದ ವಿಶಿಷ್ಟವಾಗಿ ಸ್ವಾತಂತ್ರ್ಯಾಚರಣೆ

Update: 2017-08-16 13:20 GMT

ಮಂಗಳೂರು, ಆ. 16: ಜೋಕಟ್ಟೆ ಫ್ರೆಂಡ್ಸ್ ಕ್ಲಬ್' ವಿಶಿಷ್ಠ ರೀತಿಯಲ್ಲಿ ಸ್ವಾತಂತ್ರ್ಯೋತ್ಸವನ್ನು ಆಚರಿಸಲಾಯಿತು.  ಸೌದಿ ಅರೇಬಿಯಾ ಮುಝೈನ್ ಸಂಸ್ಥೆಯ ಮುಖ್ಯಸ್ಥ ಝಕರಿಯ್ಯಾ ಜೋಕಟ್ಟೆ ಧ್ವಜಾರೋಹಣಗೈದರು.

ಜಿಲ್ಲೆಯ ಶಿಕ್ಷಣ ಪ್ರೇಮಿ ಎಂ ಇ ಮೂಳೂರು, ಜೋಕಟ್ಟೆ ಫ್ರೆಂಡ್ಸ್'ನ ಅಧ್ಯಕ್ಷ ಹನೀಫ್ ಎಂ ಎಂ,  ತಾಲೂಕು ಪಂಚಾಯತ್ ಸದಸ್ಯ ಬಿ ಎಸ್ ಬಶೀರ್,ಪಿ ಎಫ್ ಐ ಬಜ್ಪೆ ಡಿವಿಷನ್ ಅಧ್ಯಕ್ಷ ಎ ಕೆ ಅಶ್ರಫ್, ಬಿ ಸಿ ಎಫ್'ನ ಉಸ್ಮಾನ್ ಇಬ್ರಾಹೀಂ ಮೂಳೂರು,  ಹಳೆ ಮಸೀದಿ ಅಧ್ಯಕ್ಷರಾದಂತಹಾ ಒ ಎಂ ಅಬ್ದುಲ್ ಖಾದರ್, ಹೊಸ ಮಸೀದಿ ಉಪಾಧ್ಯಕ್ಷ ಹುಸೈನ್ ಮಾಸಿತ , ಅಂಜುಮಾನ್ ಸಂಸ್ಥೆಯ ಅಧ್ಯಕ್ಷ ಬಿ ಎ ರಶೀದ್, ಪಂಚಾಯತ್ ಉಪಾಧ್ಯಕ್ಷ ಶಂಸು ಜಮಾತ್, ಆಝಾದ್ ಯೂತ್'ನ ಫಯಾಝ್, ಈದ್ಗಾ ಫ್ರೆಂಡ್ಸ್'ನ ಅಜ್ಮಲ್ ಮೂಸಾ, ಮಾನವತಾ ಸೇವಾ ಸಂಘದ ನೌಶಾದ್, ಜಾಮ್ವಾದ ಬಿ ಎ ಆರಿಫ್, ಎಸ್ ಡಿ ಪಿ ಐ ಯ ಜಮಾಲ್ ಮತ್ತು ಯಾಕೂಬ್ ಉಪಸ್ಥಿತರಿದ್ದರು.

ಧ್ವಜಾರೋಹಣದ ನಂತರ ಸಂದೇಶ ಭಾಷಣಗೈದ ಎ ಕೆ ಅಶ್ರಫ್ ದೇಶದ ಸದ್ಯದ ಪರಿಸ್ಥಿತಿ ಮತ್ತು ಸ್ವಾತಂತ್ರ್ಯಾ ನಂತರದ ಭಾರತದ ಸ್ಥಿತಿಗತಿಗಳನ್ನು ವಿವರಿಸಿದರು. ಇದೇ ವೇಳೆ ಐದು ಜನ ಬಡ ಮತ್ತು ಅರ್ಹ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು  ವಿತರಿಸಲಾಯಿತು. ಐದು ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಮತ್ತು ಇದೇ ವೇಳೆ ಅಂಗವಿಕಲ ವ್ಯಕ್ತಿಯೋರ್ವರಿಗೆ ವೀಲ್ ಚೇರ್ ನೀಡಿ ಸಹಾಯ ಹಸ್ತ ನೀಡಲಾಯಿತು.

ಸಮಾಜದಲ್ಲಿ ಜನ ಪರ ಕೆಲಸಗಳಲ್ಲಿ ತೊಡಗಿದ ಪರ್ವೀಝ್ ಅಲಿ, ಊರಿನ ಚಿರಪರಿಚಿತ ಬಸ್ ಕಂಡಕ್ಟರ್ ಶಶಿಯವರ ಸೇವೆಗೆ ಮತ್ತು ಮಲೇಶ್ಯಾದಲ್ಲಿ ಜರುಗಿದ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ಮಾಸ್ಟರ್ ಮುಹಮ್ಮದ್ ಅಮಾನ್ ಇವರೆಲ್ಲರ ಸಾಧನೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬ್ಯಾಂಕ್ ಗುಡ್ಡೆಗೆ ಅಸಮರ್ಪಕವಾಗಿದ್ದ ಕಾಲುದಾರಿಯ ಕಾಮಗಾರಿ ನಡೆಸಿ ಪ್ರದೇಶದ ಜನರಿಗೆ ಸಮರ್ಪಿಸಲಾಯಿತು. ಮುಝೈನ್ ಝಕರಿಯಾರವರು ಮತ್ತು ಎಂ ಇ ಮೂಳೂರು ಇದರ ಉದ್ಘಾಟನೆ ನೆರವೇರಿಸಿದರು ಮತ್ತು ಇದಕ್ಕೆ ಬೇಕಾದ ಜಾಗವನ್ನು ಝಕರಿಯ್ಯಾರವರು ದಾನ ಮಾಡಿದ್ದು ಜನಮೆಚ್ಚುಗೆಗೆ ಪಾತ್ರವಾಯಿತು. 

ನಂತರ ಊರ ಯುವಕರ "ಅಝಾದಿ ಐಕ್ಯತಾ ಬೈಕ್ ರಾಲಿ" ನಡೆಯಿತು. ಮದ್ಯಾಹ್ನ ನಡೆದ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಸಂಜೆ ವೇಳೆ ನಡೆಯಿತು.  ಶಿಹಾಬ್ ಕಿರಾಅತ್ ಪಠಿಸಿದರೆ ಶಾಹಿಲ್ ಕಾರ್ಯಕ್ರಮ ನಿರೂಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News