×
Ad

ನೂತನ ಮೆಟ್ರೊ ರೈಲು ನೀತಿಗೆ ಸಂಪುಟದ ಅನುಮೋದನೆ

Update: 2017-08-16 19:13 IST

ಹೊಸದಿಲ್ಲಿ, ಆ.16: ಮೆಟ್ರೋ ರೈಲು ಜಾಲಬಂಧ(ನೆಟ್‌ವರ್ಕ್)ವನ್ನು ದೇಶದ ವಿವಿಧ ನಗರಗಳಿಗೆ ವಿಸ್ತರಿಸುವ ನೂತನ ಮೆಟ್ರೋ ರೈಲು ಕಾರ್ಯನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

    ಗುಣಮಟ್ಟದ ಪ್ರಮಾಣವನ್ನು ನಿಗದಿಗೊಳಿಸುವುದು, ಯೋಜನೆಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸಂಗ್ರಹಣ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವ ಬಗ್ಗೆ ಹಾಗೂ ಬಂಡವಾಳ ಮತ್ತು ಆರ್ಥಿಕ ನೆರವಿನ ಕುರಿತು ನೂತನ ಮೆಟ್ರೋ ರೈಲು ನೀತಿಯಲ್ಲಿ ವಿವರಿಸಲಾಗಿದೆ. ಪ್ರಸ್ತುತ ದಿಲ್ಲಿ, ಬೆಂಗಳೂರು, ಕೋಲ್ಕತ, ಚೆನ್ನೈ, ಕೊಚ್ಚಿ, ಮುಂಬೈ, ಜೈಪುರ ಮತ್ತು ಗುರುಗ್ರಾಮ- ಈ ಎಂಟು ಪ್ರಮುಖ ನಗರಗಳಲ್ಲಿ ಮೆಟ್ರೊ ರೈಲು ಸೇವೆ ಜಾರಿಯಲ್ಲಿದೆ. ಅಲ್ಲದೆ ಹೈದರಾಬಾದ್, ನಾಗ್‌ಪುರ, ಅಹ್ಮದಾಬಾದ್, ಪುಣೆ ಮತ್ತು ಲಕ್ನೊದಲ್ಲಿ ಮೆಟ್ರೊ ಕಾರ್ಯ ಪ್ರಗತಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News