ಹೊನ್ನಾಳ: ಸ್ವಾತಂತ್ರ್ಯ ಸಂದೇಶ ಕಾರ್ಯಕ್ರಮ

Update: 2017-08-16 14:18 GMT

ಬ್ರಹ್ಮಾವರ, ಆ.16: ಎಸ್ಸೆಸ್ಸೆಫ್ ಬ್ರಹ್ಮಾವರ ಸೆಕ್ಟರ್ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ವಾತಂತ್ರ್ಯ ಸಂದೇಶ ಭಾಷಣ ಕಾರ್ಯಕ್ರಮವನ್ನು ಹೊನ್ನಾಳ ಬಸ್ ನಿಲ್ದಾಣ ಬಳಿ ಮಂಗಳವಾರ ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಯಾಗಿ ಉಡುಪಿಯ ಪತ್ರಿಕೋದ್ಯಮ ಪ್ರಾಧ್ಯಾಪಕ ಮಂಜಪ್ಪ ಡಿ.ಗೋನಿ ಮಾತನಾಡಿ, ಎಲ್ಲಿಯವರೆಗೆ ನಮ್ಮಾಳಗೆ ನಾನು ಎಂಬ ಮನೋ ಭಾವನೆ ಇರುತ್ತದೆಯೋ ಅಲ್ಲಿಯವರೆಗು ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಇದು ವಿನಾಶಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಬ್ರಹ್ಮಾವರ ಸೆಕ್ಟರ್ ಅಧ್ಯಕ್ಷ ಇಮ್ತಿಯಾಝ್ ಹೊನ್ನಾಳ ವಹಿಸಿ ದ್ದರು. ಎಸ್‌ವೈಎಸ್ ರಾಜ್ಯ ಸದಸ್ಯ ಹಂಝತ್ ಹೆಜಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷ ಅಶ್ರಫ್ ರಝಾ ಅಂಜದಿ ಸಂದೇಶ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ಅಧ್ಯಕ್ಷ ಅಬ್ದುರ್ರಹ್ಮಾನ್ ಸಹದಿ, ಜಾಮಿಯ ಮಸೀದಿ ಹೊನ್ನಾಳ ಅಧ್ಯಕ್ಷ ಇಮಾಮ್ ಸಾಹೆಬ್, ಉದ್ಯಮಿ ಮುಸ್ತಾಕ್ ಅಹಮದ್, ರಿಲೀಫ್ ಸೆಲ್ ಅಧ್ಯಕ್ಷ ರಝಾಕ್ ಉಸ್ತಾದ್, ಸೆಕ್ಟರ್ ಉಸ್ತುವಾರಿ ಶಾಹುಲ್ ದೊಡ್ಡಣಗುಡ್ಡೆ, ಸೆಕ್ಟರ್ ಕೋಶಾಧಿ ಕಾರಿ ಸುಲೈಮಾನ್ ರಂಗನಕೆರೆ, ಡಿವಿಷನ್ ಪ್ರಧಾನ ಕಾರ್ಯದರ್ಶಿ ನಝೀರ್ ಸಾಸ್ತಾನ, ಶಂಶುದ್ದೀನ್, ಸುಹೈಬ್, ಅಶ್ರಫ್ ಬೈಕಾಡಿ, ಇಬ್ರಾಹಿಂ ಆರ್.ಕೆ., ರಫೀಕ್, ನವಾಝ್ ಮಣಿಪುರ ಉಪಸ್ಥಿತರಿದ್ದರು.

ಸೆಕ್ಟರ್ ಗೌರವ ಸಲಹೆಗಾರ ಸುಬುಹಾನ್ ಹೊನ್ನಾಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸೆಕ್ಟರ್ ಕಾರ್ಯದರ್ಶಿ ನಾಸೀರ್ ಭದ್ರಗಿರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News