ಪ್ರವಾಹಪೀಡಿತ ನೇಪಾಳಕ್ಕೆ ಚೀನಾದಿಂದ 6.42 ಕೋಟಿ ರೂ. ನೆರವು

Update: 2017-08-16 14:18 GMT

ಕಠ್ಮಂಡು, ಆ. 16: ಪ್ರವಾಹಪೀಡಿತ ನೇಪಾಳಕ್ಕೆ ಮಾನವೀಯ ನೆರವಿನ ರೂಪದಲ್ಲಿ 1 ಮಿಲಿಯ ಡಾಲರ್ (ಸುಮಾರು 6.42 ಕೋಟಿ ರೂಪಾಯಿ) ನೀಡುವುದಾಗಿ ಚೀನಾ ಮಂಗಳವಾರ ಘೋಷಿಸಿದೆ.

ಅದೇ ವೇಳೆ, ಉಭಯ ದೇಶಗಳು ಬಿಲಿಯಗಟ್ಟಳೆ ಡಾಲರ್ ವೆಚ್ಚದ ಮೂರು ಯೋಜನೆಗಳಿಗೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಹಾಕಿವೆ. ಆರ್ಥಿಕ ಮತ್ತು ತಾಂತ್ರಿಕ ಸಹಕಾರ, ತೈಲ ಮತ್ತು ಅನಿಲ ಸಂಪನ್ಮೂಲ ಸಮೀಕ್ಷೆ ಯೋಜನೆಗೆ ನೆರವು ಮತ್ತು ಬಂಡವಾಳ ಹೂಡಿಕೆ ಉತ್ತೇಜನ ಕುರಿತ ಮೂಲಚೌಕಟ್ಟು ಒಪ್ಪಂದಗಳಿಗೆ ಸಂಬಂಧಿಸಿದ ಒಪ್ಪಂದಗಳು ಇದಾಗಿವೆ.

ನೇಪಾಳದ ಉಪ ಪ್ರಧಾನಿಗಳಾದ ಬಿಜಯ ಕುಮಾರ್ ಗಛದಾರ್ ಮತ್ತು ಕೃಷ್ಣ ಬಹಾದುರ್ ಹಾಗೂ ನೇಪಾಳಕ್ಕೆ ಭೇಟಿ ನೀಡಿರುವ ಚೀನಾದ ಉಪ ಪ್ರಧಾನಿ ವಾಂಗ್ ಯಾಂಗ್ ನಡುವೆ ಮಾತುಕತೆಗಳು ನಡೆದ ಬಳಿಕ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಗಛದಾರ್ ಜೊತೆಗೆ ಮಾತುಕತೆ ನಡೆಸಿದ ವೇಳೆ ಚೀನಾದ ನೆರವನ್ನು ವಾಂಗ್ ಘೋಷಿಸಿದರು.

ನೇಪಾಳದಾದ್ಯಂತ ಭಾರೀ ಮಳೆಯಿಂದಾಗಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತಗಳಿಂದಾಗಿ 110ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ ಸಾವಿರಾರು ಮಂದಿ ನಿರ್ವಸಿತರಾಗಿದ್ದಾರೆ.

ಈ ಒಪ್ಪಂದಗಳ ಪ್ರಕಾರ, 2015ರ ಭೀಕರ ಭೂಕಂಪದಲ್ಲಿ ಧ್ವಂಸಗೊಂಡಿರುವ ಹಲವಾರು ಕಟ್ಟಡಗಳು ಮತ್ತು ಈಗ ಮುಚ್ಚಿರುವ ಕೊಡರಿ ರಾಷ್ಟ್ರೀಯ ಹೆದ್ದಾರಿಯ ದುರಸ್ತಿಗಾಗಿ ಚೀನಾವು ನೇಪಾಳಕ್ಕೆ 1 ಬಿಲಿಯ ಯುವಾನ್ (ಸುಮಾರು 959 ಕೋಟಿ ರೂಪಾಯಿ) ನಿಧಿ ಒದಗಿಸುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News