ಇಸ್ರೇಲಿಯನ್ನರನ್ನು ಕೊಂದ ಆರೋಪಿಯ ಮನೆ ಧ್ವಂಸಗೊಳಿಸಿದ ಸೇನೆ

Update: 2017-08-16 15:04 GMT

ಜೆರುಸಲೇಂ, ಆ. 16: ಕಳೆದ ತಿಂಗಳು ಜೆರುಸಲೇಂನ ಅಲ್-ಅಕ್ಸ ಮಸೀದಿಗೆ ಸಂಬಂಧಿಸಿದ ವಿವಾದ ತಾರಕಕ್ಕೇರಿದ ಸಂದರ್ಭದಲ್ಲಿ ಸಮೀಪದ ಬಡಾವಣೆಯ ಮೂವರು ಯಹೂದಿ ನಿವಾಸಿಗಳನ್ನು ಇರಿದು ಕೊಂದಿರುವ ಆರೋಪ ಎದುರಿಸುತ್ತಿರುವ ಫೆಲೆಸ್ತೀನ್ ವ್ಯಕ್ತಿಯ ಮನೆಯನ್ನು ಇಸ್ರೇಲ್ ಪಡೆಗಳು ಬುಧವಾರ ಧ್ವಂಸಗೊಳಿಸಿವೆ.

ಆಕ್ರಮಿತ ಪಶ್ಚಿಮ ದಂಡೆಯ ಕೋಬರ್ ಗ್ರಾಮದಲ್ಲಿರುವ ಮನೆಯನ್ನು ಧ್ವಂಸಗೊಳಿಸಿರುವುದನ್ನು ಇಸ್ರೇಲ್ ಸೇನೆ ಖಚಿತಪಡಿಸಿದೆ.

ಸೇನಾ ವಾಹನಗಳು ಮತ್ತು ಬುಲ್‌ಡೋಝರ್‌ಗಳು ರಮಲ್ಲಾದ ಉತ್ತರದಲ್ಲಿರುವ ಎರಡು ಅಂತಸ್ತಿನ ಮನೆಯನ್ನು ಮುಂಜಾನೆ 3 ಗಂಟೆ ವೇಳೆಗೆ ಸುತ್ತುವರಿದು ಧ್ವಂಸಗೊಳಿಸಿದವು ಎಂದು ಸ್ಥಳೀಯ ನಿವಾಸಿಗಳು ಹೇಳಿದರು.

ಇರಿತ ಘಟನೆಗೆ ಸಂಬಂಧಿಸಿ ಆರೋಪಿಯ ತಂದೆ, ತಾಯಿ ಮತ್ತು ಮೂವರು ಸಹೋದರರನ್ನೂ ಇಸ್ರೇಲ್ ಅಧಿಕಾರಿಗಳು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News